ಜೆ.ಎಂ. ಪ್ರಹ್ಲಾದ್ (J.M. Prahalad)
Kannada Author J M Prahlad

J.M. Prahalad

About the author

ವಿಜ್ಞಾನ ಪದವೀಧರ, ಆದರೆ ಚಿಕ್ಕಂದಿನಿಂದಲೇ ಕಲೆ ಮತ್ತು ಸಾಹಿತ್ಯದಲ್ಲಿ ಅತ್ಯಂತ ಆಸಕ್ತಿ. ಕಾಲೇಜು ದಿನಗಳಲ್ಲಿ ನಾಟಕ, ಕಾದಂಬರಿ ರಚನೆ. ಹಲವು ನಾಟಕಗಳಲ್ಲಿ ಅಭಿನಯ. ಪತ್ರಿಕೋದ್ಯಮದಲ್ಲಿ ಹತ್ತು ವರುಷಗಳ ಕಾಲ ವೃತ್ತಿ ಜೀವನ. ದೂರದರ್ಶನ ಮತ್ತು ಹಲವು ಖಾಸಗಿ ಟೆಲಿವಿಷನ್ ಚಾನಲ್‍ಗಳಿಗೆ ಮತ್ತು ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ರಚನೆ. ಎರಡು ದಶಕಗಳಿಂದ ದೃಶ್ಯ ಮಾಧ್ಯಮದಲ್ಲಿ ದುಡಿಮೆ. ನಾಲ್ಕು ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು, ಎಂಟು ರಾಜ್ಯಪ್ರಶಸ್ತಿ ಪಡೆದ ಚಿತ್ರಗಳು ಒಳಗೊಂಡಂತೆ 40ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳ ರಚನೆ. ಹಾಗೂ 8000ಕ್ಕೂ ಹೆಚ್ಚು ಟಿ.ವಿ. ಧಾರಾವಾಹಿಗಳ ಕಂತುಗಳಿಗೆ ಬರವಣಿಗೆ. ಮಾಯಾಮೃಗ, ದಂಡಪಿಂಡಗಳು, ಮೌನರಾಗ, ದೇವ್ರು ದೇವ್ರು ದೇವ್ರು, ಪರಂಪರೆ, ಹೆಳವನಕಟ್ಟೆ ಗಿರಿಯಮ್ಮ, ಸೀತೆ, ಮಹಾಭಾರತ ಮುಂತಾದ ಅನೇಕ ಧಾರಾವಾಹಿಗಳು. ಸಿಪಾಯಿ, ಶಿವಸೈನ್ಯ, ಜನನಿ ಜನ್ಮ ಭೂಮಿ, ಅತಿಥಿ, ಬೇರು, ತುತ್ತೂರಿ, ಹೆಜ್ಜೆಗಳು, ಗಣೇಶ ಮತ್ತೆ ಬಂದ ಮುಂತಾದ ಚಲನಚಿತ್ರಗಳು, 60ಕ್ಕೂ ಹೆಚ್ಚು ಗೀತೆಗಳ ರಚನೆ. ಗೀತರಚನೆಗಾಗಿ ರಾಜ್ಯಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕøತ. ಪ್ರವಾಹ, ಡಾಕ್ಟರ್ ಸುಕನ್ಯ ಪ್ರಕಟಿತ ಕಾದಂಬರಿಗಳು.

MORE BOOKS FROM THE AUTHOR - ಜೆ.ಎಂ. ಪ್ರಹ್ಲಾದ್ (J.M. Prahalad)

Doctor Sukanya

Author: J.M. Prahalad

Category: Social

50.00 / $ 1.99

Be first to Write Review
Back To Top