ಮದುವೆ ಗೊತ್ತಾಗಿದ್ದ ಹುಡುಗಿ ಅನಿರೀಕ್ಷಿತವಾಗಿ ತನ್ನ ಸಾವಿನ ಬಗ್ಗೆ ಚೀಟಿ ಬರೆದು ಕಣ್ಮರೆಯಾಗುತ್ತಾಳೆ. ಅಕ್ಕನ ಮದುವೆಗೆ ಸತ್ತುಹೋದ ತಂಗಿಯಿಂದ ಅಪಾಯ ಕಾದಿದೆಯಾ? ಅವಳು ದೆವ್ವವಾಗಿ ಕಾಡುತ್ತಾಳಾ? ಅಕ್ಕನನ್ನು ಅಪರಿಸಿದವರ್ಯಾರು? ಎಲ್ಲಕ್ಕೂ ಉತ್ತರ ಅನೂಹ್ಯ ರೋಚಕ ಕತೆಯಲ್ಲಿದೆ.
ಹೊಳೆನರಸೀಪುರದ ಶ್ರೀಮತಿ. ಜಯಲಕ್ಷ್ಮಿ ಮತ್ತು ಶ್ರೀ. ನಾರಾಯಣ ರಾವ್ ಅವರ ಸುಪುತ್ರರಾದ ಶ್ರೀ. ನಾಗೇಶ್ ರವರು, ಕೌಂಡಿನ್ಯ ಎಂಬ ಕಾವ್ಯ ನಾಮದಿಂದ ಸಾಹಿತ್ಯ ಕೃಷಿಯುನ್ನು ಸುಮಾರು ಮೂವತ್ತು ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದಾರೆ, ಇದುವರೆಗೂ ಇವರು ಸುಮಾರು 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ, ಇವರು ಬರೆದ ನೂರಾರು ಧಾರವಾಹಿಗಳು ಕರ್ನಾಟಕ ಸುಪ್ರಸಿದ್ಧ ಪತ್ರಿಕೆಗಳು, ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಹತ್ತು ಚಾರಿತ್ರಿಕ,ಮತ್ತು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದಾರೆ, ಸುಮಾರು 500 ಕ್ಕೂ ಹೆಚ್ಚು ದಾರ್ಮಿಕ ಲೇಖನಗಳು, 200 ನೂರಕ್ಕೂ ಹೆಚ್ಚು ಸಾಮಾನ್ಯ ಲೇಕನಗಳು, 120 ಕ್ಕೂ ಹೆಚ್ಚು ಸಣ್ಣ ಕಥೆಗಳು ಈಗಾಗಲೇ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
Chapter Name | Chapter Duration |
---|---|
ಅನೂಹ್ಯ | 42:47 |