ದಿನ ನಿತ್ಯ ಕಾಡುವ ಸಂಗತಿಗಳು ನೈತಿಕ-ಅನೈತಿಕದ ಬಗ್ಗೆ, ತಪ್ಪು-ಸರಿಗಳ ಬಗ್ಗೆ, ಸ್ವಭಾವಗಳ ಬಗ್ಗೆ ಬರೆದೆ. ಓದುಗರ ಮೇಲೆ ಹೇರದಂತೆ ಬರೆಯಲು ಪ್ರಯತ್ನಿಸಿದೆ. "ನೀವು ಬರೆದದ್ದು ಸರಿ. ನಮಗೂ ಇದೆಲ್ಲ ತೋಚುತ್ತಾ ಇರುತ್ತೆ. ಆದರೆ ಬರೆಯೋಕೆ ಗೊತ್ತಾಗಲ್ಲ. ನಮಗೆ ಅನ್ನಿಸಿದ್ದನ್ನೇ ನೀವು ಬರೆಯುತ್ತೀರಿ" ಅಂತ ಅನೇಕ ಓದುಗರು ಹೇಳಿದರು. ಈಗಲೂ ಹೇಳುತ್ತಿರುತ್ತಾರೆ. ಈ ಬೆಸ್ಟ್ ಆಫ್ ಲವಲವಿಕೆ ಬರವಣಿಗೆಯ ಅಸಲಿ ತಾಕತ್ತೇ ಅದು.
ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.
1995ರಲ್ಲಿ ಹಾಯ್ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.
ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.
Chapter Name | Chapter Duration |
---|---|
ಅಫ಼ಿಡವಿಟ್ಟು | 02:41 |
ಒಂದೇ ಒಂದು ಸಲ ಕ್ಷಮಿಸಿಬಿಡು; ಅಲೆಯಾಗಿ ಬಂದು ನಿನ್ನ ಪಾದ ತೊಳೆಯುತ್ತೇನೆ | 10:11 |
ನಾಲ್ಕು ಜನರ ಮಧ್ಯೆ ಕಾಡಿ, ಪ್ರಾಣ ತಿನ್ನಬೇಡವೋ ಮಾಧವಾ! | 10:02 |
ಯಾವತ್ತೋ ಒಂದು ದಿನ ನಿಂಗೂ ನನ್ನ ಥರಾನೇ ಬೇಜಾರಾಗುತ್ತೆ! | 11:38 |
ಗಡ್ಡದ ಸುಳಿಗೆ ಬೆರಳು ತಾಕಿಸಿ ದೊಡ್ಡಗೆ ನಕ್ಕವಳು ನೀನೇನಾ? | 12:15 |
ನನಗೆ ನಿನ್ನ ಮನಸ್ಸನ್ನಷ್ಟೆ ಮುಟ್ಟಿ ಸುಮ್ಮನಾಗುವ ಒಳ್ಳೆಯತನವಿದೆ | 11:25 |
ಯಾವುದೋ ಜಾವದಲ್ಲಿ ಅವನು ನೀನಾಗುತ್ತಾನೆ ಮೊದಲ ಮಳೆಗೆ ಪುಳಕಗೊಂಡ ಕಾನಾಗುತ್ತಾನೆ! | 10:52 |
ಮಳೆ ಮತ್ತು ನಿನ್ನ ತೆಕ್ಕೆ:ಅನುವು ಮಾಡಿಕೊಟ್ಟವನ ಹೆಸರು ದೇವರಾ? | 09:50 |
ಅದು ನೀನೇನಾ ಗೂಬೆ, ಪ್ರೇಮ ಅಂದರೆ ಹೀಗೇನಾ? | 10:24 |
ಅಮ್ಮ ಬಂದ್ಲು ಕಣೋ; ಆಮೇಲೆ ಬರೀತೀನಿ! | 08:18 |
ದೇವರೇನೆಂದುಕೊಂಡಾನೋ ಎಂದು ಸುಮ್ಮನಾದೆ! | 10:00 |
ಅನಾಯಾಸವಾಗಿ ಒಲಿದವಳೆಂಬ ಅಸಡ್ಡೆ ಬೇಡವೋ ಮುದ್ದು ಕೋತೀ! | 04:51 |
ಕಿಗ್ಗೋಳಿಯ ಜಲಪಾತದ ಕೆಳಗೆ ನೀನು ಆ್ಯಡಂ ನಾನು ಈವ್! | 09:26 |
ಮಾಡಬೇಕಾದ ವಂಚನೆಗಳನ್ನೆಲ್ಲ ಪ್ರೀತಿಯಿಂದಲೇ ಮಾಡೋಣ! | 10:32 |
ಕತ್ತಲು ಕೂಡ ಹಸಿವಿನಂತೆ, ದುಃಖದಂತೆ ವೈಧವ್ಯದಂತೆ... | 10:26 |
ಎಣಿಸಿ ಏಳು ಹೆಜ್ಜೆಗಳಲ್ಲಿ ಆ ಸಮುದ್ರ ದಾಟಿ ಬಂದುಬಿಡುತ್ತೇನೆ! | 08:41 |
ಯಾವಾಗಾದರೊಮ್ಮೆ ನಿನ್ನ ವಂಚನೆ ನನ್ನ ನಂಬಿಕೆ ಮಾತಾಡಿಕೊಳ್ಳಲಿ! | 09:03 |
ನೀನು ಒರಟ; ನೀನು ರೌಡಿ; ನಿಂದು ಹುಲಿ ಮುದ್ದು...! | 09:40 |
ಫಕೀರನ ಒರಟು ಎದೆಯ ತುಂಬ ಲಕ್ಷಾಂತರ ಬಣ್ಣದ ಚಿಟ್ಟೆ! | 10:20 |
ಬೇಲಿಯ ಪಕ್ಕ ನಿಂತವನ ಹೆಸರು ಹಿಮವಂತ್! | 10:51 |
ಫೇಲಾದ ಹುಡುಗನಿಗೆ ಹಳೇ ಪುಸ್ತಕವೇ ಇಷ್ಟ ಗೊತ್ತಾ? | 08:40 |
ಕತ್ತಿನ ಮೇಲೆ ಹೂ ಮುತ್ತು ಕೊಟ್ಟ ದಿನ ನಾಗರಪಂಚಮಿ | 08:40 |
ನಕ್ಕ ನಗೆಗಳ ಲೆಕ್ಕ ನಮ್ಮಿಬ್ಬರಲ್ಲಿಲ್ಲ; ಶೆಟ್ಟರಂಗಡಿಯಲ್ಲೂ ಇಲ್ಲವಂತೆ! | 10:10 |
ಬಸುರಿದ್ದಾಗ ನಿನ್ನ ಅಮ್ಮ ಅದಿನ್ನೆಂಥ ಕತೆ ಕೇಳಿದ್ದಳೋ? | 07:49 |
ಇದ್ದು ಆಳಿಕೋ ಅಂತ ಕನ್ನೆ ಭೂಮಿ ಕೈ ಹಿಡಿದು ಕೇಳುತ್ತದೆ! | 09:21 |
ನಿಂಗೂ ಮೊದಲು ನಂಗೂ ಮೊದಲು ಈ ಇಂಥ ಪ್ರೇಮಾ...! | 11:19 |
ಮತ್ತೆ ಒಂದೇ ಒಂದು ಸಲ ಅಪರಿಚಿತನಾಗಲಾರೆಯಾ, ಪ್ಲೀಸ್! | 10:16 |
ಕಡುಗತ್ತಲ ಟೆರೇಸಿನ ಮೇಲೆ ಉಳಿದುಹೋದದ್ದು ನಾನು ಮತ್ತು ಗ್ಲಾಸು! | 11:55 |
ನಾನೊಬ್ಬನೇ ಯಾಕೆ ಹೀಗೆ ಚಡಪಡಿಸುತ್ತೇನೆ; ಸಮುದ್ರದ ಆವೇಶದ ಹಾಗೆ? | 09:52 |
ಹುಚ್ಚು ಹುಡುಗೀ ಅಂತ ನಿನ್ನ ತಬ್ಬಿಕೊಂಡರೆ ನೀನು ಕಾದ ಬಯಲು: ನಾನು ಸುರಿವ ಮುಗಿಲು! | 08:02 |
ಬೇಕು ಅಂತಂದ್ರೆ ತನಗೆ ಎಲ್ಲವೂ ಬೇಕು:ಇಲ್ಲದಿದ್ದರೆ ಚೂರೂ ಬೇಡ! | 08:08 |
ಆಕಾಶಕ್ಕೂ ಭೂಮಿಗೂ ಮಧ್ಯೆ ಸುರಿದ ಮಳೆಯಲ್ಲೊಂದು ಕಾಮನಬಿಲ್ಲು | 08:33 |
ನನ್ನ ಜೀವನದಲ್ಲಿ ನೀನು ಮೊದಲನೇ ಗಂಡಸು ಅಂದುಕೋಬೇಡ! | 07:31 |
ಬದುಕಿನ ಹೆಜ್ಜೆಗೆ ಅದೆಷ್ಟು ಸಾವಿರ ಉತ್ಸಾಹದ ಗೆಜ್ಜೆಯೋ...! | 07:28 |
ಎಷ್ಟು ಚೆಂದಗೆ ನಗುತ್ತೀ...ಕನಸು ಬಿದ್ದ ಮಗು ನಿದ್ದೆಯಲ್ಲಿ ನಕ್ಕಂತೆ! | 06:30 |
ಬಾಹುಬಂಧನ ಕೂಡ ಸಾವಿರ ಬಿಡುಗಡೆಗಳ ಆರಂಭ ಕಣೋ ಹುಡುಗಾ... | 06:01 |
ನೀನು ನನ್ನ ಕನಸು :ನೀನೇ ನನ್ನ ಅಂತಿಮ ಚಿರನಿದ್ರೆ! | 05:51 |
ಹದಿನೆಂಟು ಅಕ್ಷೋಹಿಣಿ ಸೈನ್ಯದ ಸಂಹಾರಕ್ಕೆ ಬೇಕಾಗುವಷ್ಟು ಸಿಟ್ಟು! | 04:52 |
ಗಂಡ ಮತ್ತು ಬೆಸ್ಟ್ ಫ್ರೆಂಡ್ ಇಬ್ಬರೂ ಒಬ್ಬನೇ ಆದಾಗ ಲೈಫು... | 06:01 |
ಬಿದ್ದ ಮಳೆಗೆ ಭೂಮಿ ಘಮ್ಮೆನ್ನುತ್ತಿದ್ದರೆ ಇಡೀ ಕಾಡೇ ಪ್ರಸ್ಥಭೂಮಿ! | 06:23 |
ಅಷ್ಟು ದೊಡ್ಡ ಆಕಾಶವಾದರೂ ಕಪ್ಪೆಚಿಪ್ಪಿನ ಮಡಿಲಿಗೆ ಕೆಡವೋದು ಒಂದೇ ಸ್ವಾತಿಯ ಹನಿ! | 05:19 |
ಒಂಥರಾ ನಗ್ತೀರಲ್ಲ ನೀವು ಹೆಂಗಸರು: ಹಾಗೆ ನಗು ಸಾಕು! | 06:20 |
ಎಲ್ಲ ಬಿಟ್ಟು ಹೋದ ಮೇಲೂ ನಮ್ಮೊಂದಿಗೆ ಉಳಿಯುವವರೆಂದರೆ... | 05:22 |
ನಿನ್ನ ಸುದ್ದಿ ಹೇಳುವಾಗ ಅಪ್ಪನೆದುರು ಯಾಕೋ ತೊದಲಿದೆ ಕಣೇ... | 07:29 |
ನಂಗೊತ್ತು, ಅಂಗಳದಲ್ಲಿ ಇನ್ನು ಯಾರ ಮಾತೂ ಕೇಳಿಸುವುದಿಲ್ಲ! | 07:19 |
ನೀನು ಕೊಟ್ಟ ಪತ್ರದೊಳಗೊಂದು ಪತ್ರವಿತ್ತು ಗೆಳತೀ... | 06:47 |
ಅಷ್ಟು ಪ್ರೀತಿ ಪಡೆದ ನಾನು ಕೊನೆಯ ದಿನವೇ ಸತ್ತು ಹೋಗಬೇಕಿತ್ತು! | 07:11 |
ಕಿಟಕಿಯೊಳಗಿಂದ ಕದ್ದು ಬರುವ ಬೆಳದಿಂಗಳ ನಗ್ನ ಪಾದ ನೋಡುತ್ತಾ... | 11:19 |
ನಿನ್ನನ್ನು ಪ್ರೀತಿಸ್ತೀನಿ ಕಣೋ ಅಂತ ಒಂದು ಸಲ ಸುಳ್ಳೇ ಆದರೂ ಹೇಳಿ ಹೋಗು! | 11:33 |
ಕೆನ್ನೆಯ ತರಕು ತಾಕಿದರೆ ದೇಹದ ಅಗೋಚರ ತಂತಿಗಳಲ್ಲಿ ತಾರಸಪ್ತಕ | 12:20 |
ಮಳೆಗಾಲದ ಒಂದು ರಾತ್ರಿಯಂದು ನಮ್ಮ ಪ್ರೇಮದ ಸಾವಿನ ಆ್ಯನಿವರ್ಸರಿ ಆಚರಿಸುತ್ತಾ... | 12:02 |
ನಿನ್ನೊಂದಿಗೆ ಕೂತು ಮೊದಲ ಮಳೆ ನೋಡಿದ ಆ ರಾತ್ರಿ | 10:30 |
ಅದು ಮಳೆಯಲ್ಲಿ ನೆಂದು ಬಂದಾಗ ಅಗ್ಗಿಷ್ಟಿಕೆ ಕೊಡುವಂಥ ಕಂಫರ್ಟು | 11:58 |
ನಾನಿಲ್ಲದಿದ್ದ ದಿನಗಳನ್ನು ನೀನು ಹೇಗೆ ಕಳೆದೆ ಅಂತರ್ಮುಖೀ? | 09:31 |
ಮೂರು ವರ್ಷದ ಗೆಳೆತನದ ಮೇಲಾಣೆ ಕಣೋ: ಐ ಮಿಸ್ಯೂ! | 11:35 |
ಇತ್ತೀಚೆಗೆ ನಾನು ನನ್ನನ್ನೂ ಪ್ರೀತಿಸಿಕೊಳ್ಳುವುದನ್ನು ಮರೆತಿದ್ದೇನೆ! | 11:05 |
ನೀನು ಮಳೆಯಾಗಿ ಸುರಿದ ದಿನ ನಾನು ಮುತ್ತು ಬಚ್ಚಿಟ್ಟುಕೊಳ್ಳುವ ಕಪ್ಪೆ ಚಿಪ್ಪು | 10:11 |
ಕಾಲಾಂತರದಿಂದಲೂ ಹುಡುಗಿಯರು ಇದನ್ನು ಮಾಡುತ್ತಲೇ ಬಂದಿದ್ದಾರೆ! | 10:35 |
ರಥೋತ್ಸವ ಹೊರಟ ಕೃಷ್ಣದೇವರನ್ನು ಬೀದಿ ಪಕ್ಕದ ಮಗು ನೋಡಿದಂತೆ! | 11:29 |
ಬರುವೆನೆಂದವಳೇಕೆ ಬರಲಿಲ್ಲವೋ ಕಾಣೆ; ಅವಳು ಅಂಥವಳಲ್ಲ ಎಂದುಕೊಂಡೆ! | 11:37 |
ನಿಜ ಹೇಳು: ಸುಮ್ಮನೆ ಬರ್ತೀಯಾ ನನ್ನ ಜೊತೆ ಪ್ರಶ್ನೆ ಕೇಳದೆ? | 12:08 |
ಮೊದಲ ಮಿಲನದ ಹಾಸಿಗೆಯಲ್ಲಿ ಎಣಿಸಿದಷ್ಟೂ ಸುಖದ ಸುಕ್ಕು! | 11:11 |
ಆಕಾಶ ವೀಧಿಯ ಕೊನೆಯ ನಕ್ಷತ್ರಕ್ಕೆ ನಿನ್ನ ಹೆಸರಿಟ್ಟುಬಿಟ್ಟೆ! | 09:58 |
ಕಣ್ಣ ನೋಟದಲ್ಲೇ ಎದೆಯ ಬಣವೆಗೆ ಬೆಂಕಿ ಇಡ್ತೀಯಲ್ಲೋ? | 10:57 |
ತಳಿಕೆ ಹಾಕದ ಹೆಣ್ಣು ನಾಗರ ಸತ್ತು ಹೋಗುತ್ತದಂತೆ! | 08:19 |
ನನಗೆ ದಕ್ಕದ ಅವಳು ಮತ್ಯಾರಿಗೂ ದಕ್ಕದಿರಲಿ! | 07:52 |
ತನ್ನದೆನ್ನುವ ಎಲ್ಲವನ್ನೂ ಬೊಗಸೆಯಾರತಿಯಲ್ಲಿಟ್ಟು… | 08:47 |
ನಾಳೆ ಸೂರ್ಯಾಸ್ತವಾಗುವುದು ಗ್ಯಾರಂಟಿಯೇನಾ? | 06:35 |
ಒರಟು ದಾಡಿಯ ಮಧ್ಯೆ ಹೂ ಮುತ್ತು ಕೊಟ್ಟದ್ದಕ್ಕೆ... | 08:37 |
ವಾರಕ್ಕೊಂದೇ ಒಂದು ಭಾನುವಾರದ ಹಾಗೆ... | 06:54 |
ಅರಮನೆಯ ದೀಪದೊಂದಿಗೆ ಬೆಳಕು ಜಗಳವಾಡಿರುತ್ತದೆ | 09:29 |
ಹೀಗೇ ಇರುತ್ತೇನೆ; ಮತ್ತೊಂದು ವಂಚನೆಗೆ ಸಿದ್ಧನಾಗಿ | 07:49 |
ಕಾವಲಿಗೆ ಚಂದ್ರನಿದ್ದಾನೆ: ಎದೆ ಮುಟ್ಟಿದರೆ ಕಾಲಿಂಗ್ ಬೆಲ್ಲು! | 09:51 |
ನಾನಿಲ್ಲದ ಊರಿನಲ್ಲಿ ನೀನು ಮಾತ್ರ ಹ್ಯಾಗಿರುತ್ತೀ? | 09:04 |
ಕೆಲಸ ಬಿಟ್ಟು ಕನಸಿಗೆ ಬಂದರೆ ಬಾಸ್ ಬೈಯ್ತಾನೆ | 08:51 |
ಪಹರೆಗೆ ಕುಳಿತ ಅಮ್ಮನಿಗೂ ಹದಿನೆಂಟು ವರ್ಷಗಳಾಗಿರಲಿಲ್ವಾ? | 08:01 |
ಮುಗ್ಗರಿಸಿದ ಜಲಪಾತವೊಂದು ಭೋರ್ಗರೆದಂತೆ | 08:44 |
ಒರಟು ಬಂಡೆಯ ಮೇಲೆ ನರ್ತಕಿಯ ಪಾದಕ್ಕೆ ಪುಷ್ಪಾಂಜಲಿ | 08:49 |
ನೀನು ಹೇಳಿದ ಮೊಟ್ಟಮೊದಲ ಸುಳ್ಳೇ ಎಷ್ಟು ಚೆನ್ನಾಗಿತ್ತು ಗೊತ್ತಾ? | 11:11 |
Team Dhwanidhare
One of the best writings by Ravi Belagere.