ನಾವು ಚಿಕ್ಕವರಿರುತ್ತೇವೆ. ಕ್ಷುದ್ರತನವಿರುತ್ತದೆ. ನಮಗೇ ಗೊತ್ತಾಗುವಂಥ ಸಣ್ಣತನಗಳಿರುತ್ತವೆ. ನಮ್ಮ ಬಲಹೀನತೆಗಳು ಭಯ ಹುಟ್ಟಿಸುವಂಥವಾಗಿರುತ್ತವೆ. ನಮ್ಮ ಸಮಸ್ಯೆಗಳು ದುರ್ಭರವೆನಿಸುತ್ತಿರುತ್ತವೆ. ಅವುಗಳನ್ನು ಹೇಗೆ handle ಮಾಡಬೇಕೋ ಅರ್ಥವಾಗದೆ ಕಂಗಾಲಾಗುತ್ತಿರುತ್ತೇವೆ. ಎಲ್ಲೋ ಒಂದು ಪ್ರಜ್ಞಾವಂತ ಸಲಹೆ ಸಿಕ್ಕೀತಾ ಅಂತ ತಡಕಾಡುತ್ತಿರುತ್ತೇವೆ.ಹಾಗೆ ತಡಕಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ಈ -ಬಾಟಮ್ ಐಟಮ್.
ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.
1995ರಲ್ಲಿ ಹಾಯ್ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.
ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.
ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.
Chapter Name | Chapter Duration |
---|---|
ನಾನು ಬರೆದದ್ದು | 04:40 |
ಅಫ಼ಿಡವಿಟ್ಟು | 02:41 |
ಅದೆಷ್ಟು ಜನರ ಶ್ರದ್ಧೆ ಸೆಳೆದಿಟ್ಟುಕೊಂಡ ಮಾಯಾವಿಯಲ್ಲವೆ? | 08:07 |
ಇಬ್ಬರು ಹೆಂಡಿರ ಪರಶಿವನಿದ್ದ ಹಾಗೆಯೇ ಐವರು ಗಂಡಂದಿರ ಪಾಂಚಾಲಿಯಿದ್ದಾಳೆ! | 08:00 |
ಒಬ್ಬಂಟಿ ಹೆಂಗಸರು ಏನು ಮಾಡುತ್ತಿರುತ್ತಾರೆ? | 06:41 |
ನನಗಿಂತ ಯಡವಟ್ಟನಿಲ್ಲ ಅಂದುಕೊಂಡಿದ್ದೆ... | 04:28 |
ಅವಳನ್ನು ಬಿಗಿದಪ್ಪಿ ಯು ಆರ್ ಮೈ ವೈಫ್ ಅಂದು ಬಿಡಬಲ್ಲ, ಆದರೆ… | 06:53 |
ತೆರೆದ ಬಾಗಿಲ ಹಿಂದೆ ಕುಳಿತವನು ಅದೆಂಥ ರಾಮ? | 06:48 |
ಅದೆಲ್ಲ ಮಾಡಿ ನೋಡಿದ ಮೇಲೆ ಈ ಮಧ್ಯೆ ಮೂಡು ಕೆಟ್ಟಿಲ್ಲ! | 04:28 |
ಒಬ್ಬ ತಾಯಿಗೆ ಮಗನಾಗಲಿಕ್ಕೆ ವಯಸ್ಸಿನ ಹರಕತ್ತು ಯಾಕೆ ಬೇಕು? | 09:49 |
ಬದುಕೆಂಬ ಜಾರಿಣಿಯನ್ನು ಮನೆಯ ಜಗುಲಿಯ ಮುಂದೆ ನಿಲ್ಲಿಸಿಕೊಂಡು! | 06:55 |
ಪಕ್ಕದ ಮನೆಯ ಹುಡುಗಿಯ ಹೃದಯದೊಳಕ್ಕೆ ಇಣುಕಿದಂತೆ! | 07:36 |
ಅವನ್ನೆಲ್ಲ ಕೇವಲ ಘಟನೆಗಳು ಅಂದುಕೊಂಡು ಬಿಟ್ಟರಾಯ್ತು! | 07:40 |
ಗೆಳೆತನಕ್ಕೇಕೆ ಆಣೆ ಪ್ರಮಾಣಗಳ ಪ್ರಾಮಿಸರಿ ನೋಟು? | 06:08 |
ಗೌರವದ ಮೊದಲ ಇನ್ಸ್ಟಾಲ್ಮೆಂಟಾಗಿ ಕಾಫಿ ಕೊಟ್ಟೆ | 08:51 |
ವಹೀದಾ ರೆಹಮಾನ್ ಬಂಗಲೆಯಲ್ಲಿ ಸ್ವಲ್ಪ ಹೊತ್ತು... | 07:00 |
ಆಗ ಬದಲಾದಳು ನೋಡಿ, ಥೇಟು ಹೆಂಗಸರಂತೆ! | 06:35 |
ಅವಳಿಗೋಸ್ಕರ ಕೆಂಡದ ಮಳೆಗೆ ನೇರಾನೇರ ತಲೆಯೊಡ್ಡಿದವರು! | 07:33 |
ಮಹಾಬುದ್ದಿವಂತ ಗೆಳತಿ ನೇಮಿಚಂದ್ರ ಮತ್ತು ಬರೆಯುವವನ ಮನೆಯ ಬಾಗಿಲ ಕೆಮೆರಾ | 10:19 |
ಆತನ ಸೂರ್ಯೋದಯಕ್ಕಾಗಿ ರಾತ್ರಿಯಿಡೀ ದುಡಿದದ್ದು ಅರ್ಥಪೂರ್ಣ! | 09:42 |
ಇವತ್ತು ರಾತ್ರಿ ಸೆಳವಿನಾಳಕ್ಕೆ ಕರೆದೊಯ್ಯುತ್ತಾಳೆ ಕಲ್ಪಾ | 08:35 |
ಭೂಕಂಪನದ ನಾಡೊಂದನ್ನು ನೋಡಿ ಬರುವುದು ಬಾಕಿಯುಳಿದಿತ್ತು! | 07:38 |
ಅಂಥಾ ತಂದೆಯ ಮಕ್ಕಳ ಹೆಣ ನಾನು ಹೊರಬೇಕು! | 09:31 |
ಎದಿರಾದಾಗೊಮ್ಮೆ ನಿದ್ದೇಲಿದ್ದೀರಾ ಅಂತ ಕೇಳಿ ಪ್ರಾಣ ತಿನ್ನಬೇಡಿ! | 08:36 |
ಅಲ್ಲಿಗೆ ಹೋದಾಗೊಮ್ಮೆ ಅವನು ನೆನಪಾಗುತ್ತಾನೆ! | 06:35 |
ಇಪ್ಪತ್ತು ನಿಮಿಷ ತೆಪ್ಪಗಿರುವ ಹಟ ಪ್ರಯೋಗವಂತೆ! | 09:18 |
ಮನಸ್ಸು ಒಂದೊಂದು ಬಾರಿ ಛೇಂಜು ಕೇಳುತ್ತೆ; ಅಷ್ಟೇ! | 08:40 |
ಹೊಸ ಸಂಗೀತದೊಂದಿಗೆ ಬಂದು ನಿಂತಳು ಸುಮತಿ! | 07:31 |
ಇಷ್ಟಕ್ಕೂ ಅವಳೇಕೆ ಮೊದಲ ಮಿಲನದ ನಂತರ ಅಳುತ್ತಾಳೆ? | 08:06 |
ಇದರ ಬದಲು ಅವುಗಳನ್ನೆಲ್ಲ ಬಳಸಬಹುದು ಅಂತ ಗೊತ್ತಿರಲಿಲ್ಲ! | 08:56 |
ಪ್ರತಿನಿತ್ಯ ಗಾಯತ್ರಿ ಮಂತ್ರ ಹೇಳಿಕೊಂಡರೆ ಏನಾಗುತ್ತೆ ಗೊತ್ತಾ? | 06:55 |
ಎಷ್ಟು ಚಿಕ್ಕ ಸಮಯದಲ್ಲಿ ಎಂಥಾ ದೊಡ್ಡ ಟೆಸ್ಟು ಬರೆಯಬೇಕಲ್ಲ? | 06:29 |
ಹುಲಿ ಬಣ್ಣದ ಚೆಡ್ಡಿಯೂ: ಗಿಫ್ಟ್ ಚೆಕ್ ಎಂಬ ಪೀಡೆಯೂ! | 08:15 |
ಕೆಟ್ಟ ಹೆಂಗಸು ಅಂದರೆ ಕೇವಲ ಬಲಹೀನ ಹೆಂಗಸಂತೆ! | 07:22 |
ಸುಭಾಷ್ಚಂದ್ರ ಬೋಸ್ ಎಂಬ ಚಿಕ್ಕಪ್ಪನನ್ನು ನೋಡಿದ್ದು ಅವತ್ತೇ ಕೊನೆ! | 10:28 |
ನಾನು ಪ್ರೀತಿಸಿದ ಹುಡುಗಿಯರಿಗೆ ಸದಾ ಹದಿನೆಂಟು ವರ್ಷ | 08:35 |
ಆ ಭೇಟಿಗಿದ್ದುದು ಅಷ್ಟೇ ಆಯುಸ್ಸು ಕಣೋ! | 07:09 |
ಬೇಂದ್ರೆ ತಾಕತ್ತು ಎಂಥದಿತ್ತು: ನಮಗೇಕದು ಅರ್ಥವಾಗದೆ ಹೋಗಿತ್ತು? | 07:28 |
ಕೊಟ್ಟ ಮಾತು ತಪ್ಪಿಸಿಕೊಳ್ಳಲು ದುಃಖವೇನು ಸುಖವಾ? | 06:41 |
ಓದಕ್ಕಾಗಲ್ಲ, ಬರಿಯಕ್ಕಾಗಲ್ಲ, ನಂಗೆ ಕಾನ್ಸಂಟ್ರೇಶನ್ನೇ ಇಲ್ಲ; ಏಕೆಂದರೆ... | 08:39 |
ಎಲ್ಲ ರೈಲುಗಳಿಗೂ ಒಂದು ಅಂತಿಮ ನಿಲ್ದಾಣವಿರುತ್ತದೆ! | 08:15 |
ಇಬ್ಬರು ಗುಲಾಮರು ಹೇಗೆ ಸಂತೋಷವಾಗಿರಲು ಸಾಧ್ಯ? | 06:43 |
ತೆರೆದೇನೆಂದರೆ ಒಂಟಿತನದ ಹುತ್ತಕ್ಕೆ ಕಿಟಕಿಗಳೇ ಇಲ್ಲ? | 08:16 |
ನೀನಿದ್ದರೇನು ಹತ್ತಿರ? ಎಷ್ಟೊಂದು ನಡುವೆ ಅಂತರ! | 07:06 |
ಈತ ನನಗೇ ಏಕೆ ಗಂಟು ಬಿದ್ದ? | 07:09 |
ಪ್ರೇಮವೆಂಬುದು ನೈತಿಕವೋ ಅನೈತಿಕವೋ: ಉತ್ತರ ಸಿಗಬೇಕೆಂಬ ಹಟವಾದರೂ ಯಾಕೆ? | 08:50 |
ಲೆಟ್ ಅಸ್ ಫೇಸ್ ದಿ ಕಷ್ಟ! | 07:29 |
ನಾನಾಗಲೇ ಅದನ್ನು ಗುರುತಿಸಿಯಾಗಿದೆ! | 07:55 |
ಆ ಹೆಣ್ಣು ಮಗಳಿಗೊಂದು ನಂಬುಗಸ್ಥ ಕಿವಿ ಬೇಕು ಅಷ್ಟೆ! | 07:10 |
ಗಾಸಿಪ್ಪು ನಮ್ಮನ್ನು ಎಚ್ಚರಿಸುತ್ತದೆ: ನಾವು ಎಚ್ಚೆತ್ತುಕೊಳ್ಳಬೇಕು! | 08:13 |
ಕಷ್ಟ ಬಹುಕಾಲ ಉಳಿಯಲ್ಲ, ಕಷ್ಟ ಜೀವಿ ಉಳಿಯುತ್ತಾನೆ | 05:17 |
ಯಾವನ ಮನದ ಮೂಲೆಯ ಒಲೆಯ ಮೇಲೆ ಯಾವ ಪಕ್ವಾನ್ನ ಬೇಯುತ್ತಿರುತ್ತದೋ? | 09:14 |
ಮೊದಲ ಸಲದ ಪರ್ಫಾರ್ಮೆನ್ಸು ನೆನೆಸಿಕೊಂಡು! | 05:58 |
ಎಲ್ಲಿದ್ದಾನವನು, ತುಮೀ ಹೋ ಬಂಧು, ಸಖಾ ತುಮೀ ಹೋ | 07:41 |
ಅದನ್ನು ಎಲ್ಲಿಟ್ಟಿರಬೇಕೋ ಅಲ್ಲಿಡಿ! | 07:41 |
ಏಕೆಂದರೆ, ಅವನು ಪ್ರತಿ ಹೆಣ್ಣನ್ನೂ ಕೇವಲ ಗಂಡಸಾಗಿ ನೋಡುತ್ತಾನೆ! | 08:03 |
ನಾವೇ ಗೀಚಿಕೊಂಡ ನಾಲ್ಕು ಗೆರೆಗಳ ನಡುವಿನ ಜಾಗವೇ ಅಲ್ಲವೇ ಮನೆ? | 08:07 |
ಮನ ಮುರಿಯುವುದಕ್ಕೂ ಒಂದು ಮೆಥೆಡ್ ಉಂಟು! | 08:08 |
ನಮ್ಮ ಎಲ್ಲ 'ಇಲ್ಲ'ಗಳ ಮಧ್ಯೆ ನಾವಿರುತ್ತೇವಲ್ಲವೆ? | 09:29 |
ತುತ್ತು ನಿಮ್ಮ ಕೈಯಲ್ಲೇ ಇರಬಹುದು; ಆದರೆ ಮಗುವಿಗೆ ಹಸಿವೇ ಆಗದಿರಬಹುದು! | 08:52 |
ಅಸಲು ಕ್ಯಾಲ್ಕುಲೇಟರ್ರೇ ಬಿಸಾಡಿ ಬಂದವರ ನಡುವೆ ನಾನೂ ಒಬ್ಬ | 07:40 |
ಖಚಿತವಾಗುವ ಮುನ್ನ ಖಾಯಿಲೆ ಬೀಳುವುದ್ಯಾಕೆ? | 09:42 |
ಚರ್ಚೆಗೆ ಒಲಿಸಿಕೊಂಡ ಗೆಳತಿಯ ಘಮವಿರುತ್ತದೆ! | 06:49 |
'ಏನಂದ್ಕಂಡಿದೀಯ ನನ್ನನ್ನ' ಅಂತ ಯಾರನ್ನೂ ಕೇಳಬೇಡಿ! | 14:21 |
ಬೀಸು ಗಾಳಿಗೆ ಮೈಯೊಡ್ಡಲಾಗದವನು ಚಂಡ ಮಾರುತದ ಬೆನ್ನತ್ತಲಾರ! | 08:49 |
ಎಲ್ಲ ಯಶಸ್ವಿಗಳೂ ಜೀನಿಯಸ್ಸುಗಳೇನಲ್ಲ! | 07:16 |