Home / Audio Books / Gaadegala Kathakosha Bhaaga 1 - Audio Book
Gaadegala Kathakosha Bhaaga 1 - Audio Book eBook Online

Gaadegala Kathakosha Bhaaga 1 - Audio Book (ಗಾದೆಗಳ ಕಥಾಕೋಶ ಭಾಗ ೧- ಆಡಿಯೋ ಪುಸ್ತಕ)

About Gaadegala Kathakosha Bhaaga 1 - Audio Book :

ಗಾದೆಗಳು ಕನ್ನಡ ಭಾಷಾ ಸೊಗಡನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬದುಕಿನಲ್ಲಿ ತಪ್ಪು ಸರಿಗಳನ್ನು ಹೇಳಿಕೊಡುವ ಕಥೆಗಳಲ್ಲಿ ಗಾದೆಗಳನ್ನು ಬಳಸಿರುವುದು ಸೊಗಸಾದ ವಿಚಾರ. ಗಾದೆ ಕೇಳಿದ್ದರೂ ಕಾರಣ ತಿಳಿಸುವ ಪ್ರಯತ್ನ ಈ ಪುಸ್ತಕದ ಮೂಲಕ ಸಾಧ್ಯವಾಗಿದೆ.

About Su Rudramurthy Shastry :

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.

Chapter Details:
Chapter Name Chapter Duration
ಅಕ್ಕ ನಮ್ಮೋಳಾದ್ರೆ ಭಾವ ನಮ್ಮೋನ 13:01
ಅದೇ ಉಂಡೀನು ಕದ ತೆಗಿ 16:06
ಅಪ್ಪ ಭಟ್ಟರ ಮಗಳಾಗಿ 07:39
ಆಗೋ ತನಕ ನಂದು ಹಿಡಿ ಆದ್ಮೇಲೆ ಹೊಂಗೆ ಬೇರು ಹಿಡಿ 06:47
ಇದ್ದಿದ್ದೊಂದಿಷ್ಟು ಇಲಿ ಕಚ್ಚಿಕೊಂಡು ಹೋಯ್ತು 05.30
ಇಲ್ಲದ ಬದುಕು ಮಾಡಿ ಇಲಿಗೆ ಚಡ್ಡಿ ಹೊಲಿಸಿದ 07.54
ಎಂದೂ ಇಲ್ಲದ ಗೌಡ ಹಿಂದು ಮುಂದಾಗಿ ಕುದುರೆ ಹತ್ತಿದ 10:25
ಕರೆಯೋ ಹಸುಕೊಟ್ಟು ಒದೆಯೋ ಕತ್ತೆ ತಂದ 08:15
ಕಳ್ಳನ ನಂಬಿದ್ರು ಕುಳ್ಳನ್ನ ನಂಬಬಾರದು 16:06
ಕುಂಬಳಕಾಯಿ ಕಳ್ಳ ಅಂದ್ರೆ 09:59
ಮನೆ ತುಂಬಾ ಮಕ್ಕಳು ಕಣ ಕಾಯಲು‌ ಜನ ಇಲ್ಲ 07:08
ರಟ್ಟೆ ಮುರಿದು‌ ರೊಟ್ಟಿ ತಿನ್ನು 08:53
ಸಾವಿರ ವರ್ಷ ಸಾಮು ಮಾಡಿ 09:39
ಹಂದಿ ತನ್ನ ಚಂದಕ್ಕೆ 05:46
ಬಡವನ ಕೋಪ‌ ದವಡೆಗೆ ಮೂಲ 08:55
ಬೈದು ಹೇಳಿದ್ರೋ ಬದುಕಕ್ಕೆ ಹೇಳಿದ್ರೋ ಸಾಯೋ ಮುದುಕಿ ಸೊಂಟ ಮುರಿದ 11:46
ಹೆಸರು ಕ್ಷೀರಸಾಗರ ಭಟ್ಟ 05:51
ಗಂಡ ಹೆಂಡಿರ ಜಗಳದಲ್ಲಿ 09:21
Rent For 30 Days
Write A Review

Author's Books