ಗಾದೆಗಳು ಸ್ವಾರಸ್ಯವಾದ ಕತೆಗಳನ್ನು ಒಳಗೊಂಡಿದೆ. ಹಾಸ್ಯ ವಿಡಂಬನೆಗಳ ಮೂಲಕ ರೂಪುಗೊಂಡ ಆ ಕತೆಗಳ ಮೂಲ ಆಶಯ ಒಂದು ನೀತಿಯನ್ನು ವಿವರಿಸುವುದೇ ಆಗಿದೆ .
ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.
Chapter Name | Chapter Duration |
---|---|
ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ | 06:11 |
ಅಡಿಕೆ ಕದ್ರು ಕಳ್ಳ ಆನೆ ಕದ್ರು ಕಳ್ಳ | 08:56 |
ಅಂದು ಬಾ ಅಂದ್ರ ಮಿಂದು ಬಂದ | 05:21 |
ಇತ್ತ ಬಾ ಅಂದರೆ ಇದ್ದ ಮನೆ ಕಿತ್ಕೊಂಡ | 13:24 |
ಇಲ್ಲಿಗೂ ಬಂದೆಯಾ ಜಡೆ ಶಂಕರ | 14:18 |
ಉಂಡು ಹೋದ ಕೊಂಡು ಹೋದ | 04:21 |
ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು | 04:39 |
ಕಳ್ಳ ಪೂಜಾರಿಗೆ ಮೈಯಲ್ಲಾ ನಾಮ | 16:14 |
ಕುಟ್ಚಿ ಕುಂದಾಪುರಕ್ಕೆ ಹೋದ ಹಾಗೆ | 07:04 |
ಕೊಡ್ತಿಯಾ ಅಂದ್ರೆ ಕುದುರೆ ತಗೋತಿಯಾ ಅಂದರೆ ಕತ್ತೆ | 07:37 |
ತಾಳಿದವನು ಬಾಳಿಯಾನು | 14:21 |
ಬಿದ್ರೆ ಕಾಲು ಹಿಡಿತಾರೆ ಎದ್ದರೆ ಜುಟ್ಟು ಹಿಡಿತಾರೆ | 05:45 |
ಮನೆ ದೀಪ ಅಂತ ಮುದ್ದಿಟ್ರೆ ಗಡ್ಡ ಮೀಸೆ ಸುಟ್ಟೊಹೊಯ್ತು | 06:52 |
ಮೀಸೆ ಬಂದೊನಿಗೆ ದೇಶ ಕಾಣೋಲ್ಲ | 04:22 |
ಸಾಲ ಮಾಡಿ ಓಲೆ ಮಾಡಿಸಿದ ಓಲೆ ಮಾರಿ ಬಡ್ಡಿ ತೀರಿಸಿದ | 13:06 |
ಹಂಗಿನ ಹೋಳಿಗೆ ಗಿಂತ ತಂಗಳನ್ನ ಲೇಸು | 09:08 |
ಹಾಲಿಂದ ಹಾಲಿಗೆ ನೀರಿಂದ ನೀರಿಗೆ | 07:41 |
ಹೋಗು ಅನ್ನಲಾರದೆ ಹೋಗೆ ಹಾಕಿದ್ರಂತೆ | 07:49 |