ದೇಶ ಕಾಯುವುದು ಅತ್ಯಂತ ಹೆಮ್ಮೆಯ ಮತ್ತು ಜೀವಪಣಕ್ಕಿಟ್ಟು ಹೋರಾಡುವ ಕಾಯಕ. ಇಂದು ಲೇಹ್-ಲಡಾಕ್ ಭಾರತದಲ್ಲೇ ಉಳಿದುಕೊಂಡಿದ್ದರೆ ಅದಕ್ಕೆ ಕಾರಣನಾದ ಲಡಾಕಿ ಯುವಕ ಚೆವಾಂಗ್ ರಿಂಚೆನ್ ನ್ನು ಮರೆಯುವ ಹಾಗಿಲ್ಲ. ಅಲ್ಲಿನ ವಿಪರೀತ ಮಂಜು ಸುರಿಯುವ ಪ್ರಕೃತಿಯ ಪರಿಸ್ಥಿತಿಯಲ್ಲಿ , ಕೇವಲ ಹದಿನೈದೇ ದಿನದಲ್ಲಿ ತರಬೇತಿ ಪಡೆದು, ತನ್ನದೇ ತಂಡ ಕಟ್ಟಿಕೊಂಡು ಹಲವು ಬಾರಿ ದೈಹಿಕ ಸಾಮರ್ಥ್ಯದಿಂದಲೇ, ಪಾಕೀಸ್ಥಾನವನ್ನು ಬಗ್ಗು ಬಡಿದ ಮುಗ್ಧ ಮನಸ್ಸಿನ ಸಾಹಸೀ ಯುವಕನ ಯಶೋಗಾಥೆಯೇ ಈ ಪುಸ್ತಕದ ತಿರುಳು. ಚಕ್ರವರ್ತಿ ಸೂಲಿಬೆಲೆ ಅವರ ಕಂಚಿನ ಕಂಠದಲ್ಲಿ ಅತ್ಯಂತ ಅಮೋಘವಾಗಿ ಆಡಿಯೋ ಪುಸ್ತಕ ಮೂಡಿಬಂದಿದೆ.
ಚಕ್ರವರ್ತಿ ಸೂಲಿಬೆಲೆ ವಾಗ್ಮಿ, ಚಿಂತಕ, ಅಂಕಣಕಾರ, ಬರಹಹಾರ ಮತ್ತು ಸಾಮಾಜಿಕ ಕಾರ್ಯಕರ್ತ. ಜೊತೆಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರು. ಅವರ ಸಾಮಾಜಿಕ ಸೇವೆ ಮತ್ತು ಪರಿಹಾರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಹಲವು ಪುಸ್ತಕಗಳನ್ನೂ ರಚಿಸಿದ್ದಾರೆ. ಇವರ ಮೂಲ ಹೆಸರು 'ಮಿಥುನ್ ಚಕ್ರವರ್ತಿ'.
Chapter Name | Chapter Duration |
---|---|
ನಾನು ಗಡಿ ಕಾಯುತ್ತೇನೆ | 10:50 |
ಪ್ರತಿರೋಧವೇ ಇಲ್ಲದ ಕದನ | 09:07 |
ಗುಂಡಿಗೆ ಎದೆಕೊಡಲು ಗುಂಡಿಗೆ ಬಲವಾಗಿರಬೇಕು | 13:10 |
ತಾಕತ್ತು ತೋರಿಸಿಯೇ ಸೈನಿಕನಾದ | 10:35 |
ಸ್ವಾಭಿಮಾನದ ತರುಣ ಮಹಾವೀರನಾದ | 14:21 |
ನೆಹರೂ ತಪ್ಪಿಗೆ ನೂರಾರು ಬಲಿ | 19:10 |
ಶತೃಗಳ ಹೊಕ್ಕುಳಲ್ಲೂ ನಡುಕ | 11:12 |
ಸದಾ ಸನ್ನದ್ಧ ಬೇಕಿದ್ದರೆ ನಡೆಯಲಿ ಯುದ್ಧ | 06:05 |
ಪಾಕೀಸ್ಥಾನಕ್ಕೆ ಕಪಾಳಮೋಕ್ಷ | 12:18 |
ಗೆಲ್ಲುವುದಷ್ಟೇ ಅಲ್ಲ, ಮರು ನಿರ್ಮಾಣವೂ ಆಗಬೇಕು | 11:48 |
ಕಾರ್ಮೋಡಕ್ಕೂ ಬೆಳ್ಳಿಗೆರೆಯಿದೆ | 04:57 |