Home / Audio Books / Olave - Audio Book
Olave - Audio Book eBook Online

Olave - Audio Book (ಒಲವೇ - ಆಡಿಯೋ ಪುಸ್ತಕ)

About Olave - Audio Book :

ಒಲವೇ... ಪ್ರೀತಿಯ ಆಳದ ಕುರಿತು ತಮ್ಮದೇ ಶೈಲಿಯಲ್ಲಿ ವಿವರ ಕೊಡುತ್ತಾ, ಪ್ರೀತಿಯೆಂದರೆ ಆಧ್ಯಾತ್ಮವೂ ಹೌದು‌ ಅನಿವಾರ್ಯ ಕ್ರೌರ್ಯವೂ ಹೌದು. ತಂಪಗಿನ ತಂಗಾಳಿಯೂ ಹೌದು ಬೆಂಗಾಡಿನ ಬಿಸಿಲೂ ಹೌದು. ಎನ್ನುತ್ತಾ ಬೆಂಗಾಡಿನಲ್ಲಿ ಬೀಸುವ ತಂಗಾಳಿಯೇ ಪ್ರೀತಿಯಲ್ಲವೇ ಅಂತ ಪ್ರಶ್ನಿಸುವ ಅವರ ಧಾಟಿ ಅವರ ಮಾತಿನಲ್ಲಿ ಕೇಳೋದೇ ಚೆಂದ. ಅಂತಹ ಪ್ರೀತಿಭರಿತ ಆಡಿಯೋಬುಕ್ ಒಲವೇ ಕೇಳಿ ಅವರದ್ದೇ ಧ್ವನಿಯಲ್ಲಿ.

About Ravi Belagere :

ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.

Chapter Details:
Chapter Name Chapter Duration
ಒಲವೇ 59:27
Rent For 30 Days
Write A Review

Author's Books