ಮಕ್ಕಳಿಗೆ ಬದುಕಿನ ಮೌಲ್ಯಗಳನ್ನು ಪ್ರಾಣಿ,ಪಕ್ಷಿ, ಕಾಡು ಈ ರೀತಿಯ ಉದಾಹರಣೆಗಳನ್ನು ಆಧಾರವಾಗಿಟ್ಟುಕೊಂಡು ಕತೆಯನ್ನು ಹೇಳಿ ಆ ಕತೆಗಳ ಮೂಲಕ ಅವರಿಗೆ ಬದುಕಿನ ಸಂದೇಶಗಳಾದ ಸತ್ಯ,ನ್ಯಾಯ,ನೀತಿ,ಪ್ರಾಮಾಣಿಕತೆಯನ್ನು ಕತೆಗಳ ಮೂಲಕ ತಿಳಿಸುವುದೇ ಆಗಿದೆ.
ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು 16 ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ 30 ಕೃತಿ ರಚಿಸಿದ್ದು, ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.
Chapter Name | Chapter Duration |
---|---|
ಅತಿಥಿ ಸತ್ಕಾರ | 01:01 |
ಅರ್ಧಚಂದ್ರ ಪ್ರಯೋಗ | 01:58 |
ಅವಿವೇಕದ ಬುದ್ಧಿವಂತಿಕೆ | 05:42 |
ಆತುರದ ಬುದ್ದಿವಂತಿಕೆ | 02:18 |
ಆನೆ ಮತ್ತು ಹುಲಿ | 01:47 |
ಆಪತ್ತಿನ ನೆಂಟ | 02:19 |
ಉಪಕಾರವನ್ನು ಮಾಡಿ ಕೆಟ್ಟ ಹುಲಿ | 02:00 |
ಎರಡು ಗಿಳಿಗಳ ಕತೆ | 04:52 |
ಒಂದು ದೇಹ ಎರಡು ತಲೆ | 01:37 |
ಒಂಟೆ ಮತ್ತು ಕಾಗೆ | 08:33 |
ಕತ್ತೆಯ ಸಂಗೀತ | 03:09 |
ಕಪಿಯ ಸೇಡು | 08:58 |
ಕಪಿಂಜರ ಮೊಲ ಮತ್ತು ಹುಲಿ | 05:16 |
ಕಪ್ಪೆಗಳನ್ನು ಬೆನ್ನೇರಿಸಿಕೊಂಡ ಸರ್ಪ | 04:23 |
ಕಪ್ಪೆಯ ಕತೆ | 01:27 |
ಕಬ್ಬಿಣದ ತಕ್ಕಡಿ | 03:28 |
ಕಳ್ಳನಿಗೆ ಸುಳ್ಳೇ ಬಲ | 05:45 |
ಕಳ್ಳನಿಂದ ಬದುಕಿದ ವಿಪ್ರರು | 03:42 |
ಕಾಗೆ ಕೃಷ್ಣ ಸರ್ಪವನ್ನು ಕೊಂದ ಕತೆ | 02:53 |
ಕೀಲನ್ನು ಕಿತ್ತ ಕೋತಿ | 01:15 |
ಕೃಷ್ಣಸರ್ಪ | 02:50 |
ಕೆಟ್ಟ ಅತ್ತೆ | 04:10 |
ಕೆಟ್ಟ ಹೆಂಡತಿ | 05:32 |
ಕೊಕ್ಕರೆ ಮತ್ತು ಏಡಿ | 04:35 |