ಪಾರಿವಾಳಗಳು - ಲಲಿತ ಪ್ರಬಂಧಗಳು
ಈ ಪುಸ್ತಕದಲ್ಲಿ ಒಟ್ಟು 12 ಪ್ರಬಂಧಗಳಿದ್ದು ಲಘು ಹಾಸ್ಯದೊಂದಿಗೆ ಸುಂದರವಾಗಿ ಮೂಡಿಬಂದಿದೆ. ಪ್ರತಿನಿತ್ಯ ನಾವು ನೋಡುತ್ತಿರುವ ಅನುಭವಸುತ್ತಿರುವ ವಿಷಯಗಳನ್ನೇ ವಸ್ತುಗಳನ್ನಗಿಸಿಕೊಂಡು ತಿಳಿ ಹಾಸ್ಯ ಧಾಟಿಯಲ್ಲಿ ಲೇಖಕ ವಿಠಲ್ ಶೆಣೈ ಸೊಗಸಾಗಿ ರಚಿಸಿದ್ದಾರೆ. ನಕ್ಕು ನಲಿಯಲು ಈ ಪುಸ್ತಕ ಸಖತ್ ಮಜವೆನಿಸುತ್ತದೆ.
ಮಂಗಳೂರಿನಲ್ಲಿ ಹುಟ್ಟಿ, ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿದ ವಿಠಲ್ ಶೆಣೈಯವರು, ಬೆಂಗಳೂರಿನ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಬರವಣಿಗೆಯ ಹುಚ್ಚು ಕಳೆದ ಏಳು-ಎಂಟು ವರ್ಷಗಳಿಂದ ಪ್ರಾರಂಭವಾಗಿ ಈಗ ಪುಸ್ತಕ ಪ್ರಕಾಶನದತ್ತ ತಮ್ಮ ಸಾಹಿತ್ಯ ಪ್ರಯಾಣವನ್ನು ಮುಂದುವರೆಸಿದ್ದಾರೆ. ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರ್-ಗಳಂತಹ ದೇಶಗಳನ್ನು ಕೆಲಸದ ನಿಮಿತ್ತ ವಿಹರಿಸಿ, ವಿವಿಧ ಜನರೊಡನೆ ಬೆರೆತು, ಅಲ್ಲಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಅವುಗಳನ್ನು ಕಥೆ, ಪ್ರಬಂಧ ಮತ್ತು ಕಾದಂಬರಿಗಳಲ್ಲಿ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿ, ಕೆ.ಎನ್.ಗಣೇಶಯ್ಯ ನವರಂತಹ ಮಹಾನ್ ಲೇಖಕರ ಬರಹಗಳನ್ನು ಓದಿ ಪ್ರೇರೇಪಿತರಾಗಿದ್ದಾರೆ. ಸಾಫ್ಟ್ವೇರ್ ಕೋಡ್ ಮತ್ತು ಕಥೆಗಳನ್ನು ನಿಯತವಾಗಿ ಬರೆಯುತ್ತಾರೆ.
Chapter Name | Chapter Duration |
---|---|
ಪಾರಿವಾಳಗಳು | 12:16 |
ಶಾಲೆಗೆ ರೆಡಿ | 12:41 |
ಪತ್ರ ಬರೆಯಲಾ | 12:34 |
ಭಾನುವಾರದ ಪಟ್ಟಿ | 12:21 |
ಗ್ಯಾಸ್ ಪ್ರಾಬ್ಲಂ | 17:57 |
ವಿದೇಶ ಯಾನ | 19:10 |
ಡೆನ್ವರ್ ಪಯಣ | 21:32 |
ಅಮೆರಿಕಾದಲ್ಲಿ ಡ್ರೈವಿಂಗ್ | 19:37 |
ದಂತಕತೆ | 15:42 |
ಕಾಣೆಯಾದ ಹುಡುಗ | 14:00 |
ನೋ ಪಾರ್ಕಿಂಗ್ | 11:25 |
ಚಪ್ಪಲಿ ರಕ್ಷೆ | 15:49 |