ಈ ಕಥಾಸಂಕಲನದಲ್ಲಿ ಆರು ಸಾಹಸಮಯ ಥ್ರಿಲ್ಲರ್, ವೈಜ್ಞಾನಿಕ ಮತ್ತು ಚಾರಿತ್ರಿಕ ಪತ್ತೇದಾರಿ ನೀಳ್ಗತೆಗಳಿವೆ. This Collection Contains Six Mystery, Science Fiction And Modern Adventure Novelettes.
ಲೇಖಕನ ಕಿರು ಪರಿಚಯ:
ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್. ಹುಟ್ಟಾ ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.
ನಾನು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರ.
ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ.
ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.
ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ
Chapter Name | Chapter Duration |
---|---|
ವಿನಾಶಕಾಲೆ | 44:38 |
ಆಕಾಶದಾಗೆ ಯಾರೋ | 1:05:56 |
ಡಿಸ್ಟೋಪಿಯಾ | 1:08:41 |
ಲೆಮೂರಿಯ | 1:02:10 |
ನಡುಗಡಲಿನ ಹಡಗು | 1:12:40 |
ಮೈನಾಕ | 1:30:57 |