ಹವ್ಯಾಸೀ ಲೇಖಕಿಯಾಗಿ ಅತ್ಯುತ್ತಮ ಕೃತಿಗಳನ್ನು ರಚಿಸುತ್ತಿದ್ದ ವಿಜಯ ಎಸ್.ಪಿ. ಒಬ್ಬ ಪ್ರವಾಸಿ ಪ್ರಿಯರೂ ಹೌದು. ತಾವು ಹೋಗಿಬಂದ ಪ್ರವಾಸವನ್ನು ತಮ್ಮ ಅನುಭವದ ಮೂಸೆಯಿಂದ ಜಾಗ್ರತೆಯಿಂದ ಎಲ್ಲೂ ವಿಷಯ ವಿವರಣೆ ಹೆಚ್ಚಾಗದಂತೆ ಬೇಸರವಾಗದಂತೆ ರಂಜನೀಯವಾಗಿ ವಿವರಿಸಿದ್ದಾರೆ. ಈ ಪುಸ್ತಕದಲ್ಲಿ ತಮ್ಮ ಪತಿಯೊಂದಿಗೆ ಮೊಟ್ಟಮೊದಲ ಬಾರಿಗೆ ದೂರದ ದೇಶಕ್ಕೆ ಪ್ರವಾಸ ಕೈಗೊಂಡ ವಿಚಾರವನ್ನು ಸಹಜವಾಗಿ ತೆರೆದಿಟ್ಟಿದ್ದಾರೆ. ಮೊದಲ ಬಾರಿ ಹೊರದೇಶದ ಪ್ರವಾಸವನ್ನು ಮಾಡುವವರಿಗಾಗಿ ಒಬ್ಬ ಗೆಳತಿಯಾಗಿ ನೀಡುವ ಸಲಹೆ ಸೂಚನೆಗಳು, ಆಪ್ತವೆನಿಸುತ್ತವೆ.
ಹೆಸರು ಎಸ್.ಪಿ. ವಿಜಯಲಕ್ಷ್ಮಿ. ಬಿ.ಎ. ಪದವೀಧರೆ. ಹುಟ್ಟಿದ್ದು ನರಸಿಂಹರಾಜಪುರ. ಶಾಲಾ ದಿನಗಳಲ್ಲಿ ಉತ್ತಮ ಡಿಬೇಟರ್. ವಿವಾಹಾನಂತರ ಬೆಂಗಳೂರಲ್ಲಿ ನೆಲೆಸಿದ್ದಾರೆ. ಕಸೂತಿ, ಟೈಲರಿಂಗ್ ಹವ್ಯಾಸ. ನಂತರದಲ್ಲಿ ಬರವಣಿಗೆ ಹವ್ಯಾಸವಾಯಿತು. ವಿಶ್ವದ ಹಲವಾರು ದೇಶಗಳ ಪ್ರವಾಸ ಮಾಡಿರುವ ನನ್ನ ಬಹಳಷ್ಟು ಕಥೆಗಳು, ಲೇಖನಗಳು, ಪ್ರವಾಸ ಕಥನಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ...ಇದುವರೆಗೂ 3 ಕಾದಂಬರಿ , 4 ಕಥಾಸಂಕಲನ, 4 ಕವನ ಸಂಕಲನ ಪ್ರಕಟವಾಗಿದೆ... ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಬಹುಮಾನದ ಜೊತೆ , ಇನ್ನೂ ಅನೇಕ ಬಹುಮಾನಗಳು ಸಂದಿವೆ.
Chapter Name | Chapter Duration |
---|---|
ಪುಟ ತೆರೆಯುವ ಮುನ್ನ | 06:51 |
ಆಗಸಕ್ಕೆ ಹಾರುವ ಮುನ್ನ | 43:34 |
ಯೂರೋಪ್ | 40:43 |
ಬೆಲ್ಜಿಯಂ | 23:33 |
ಜರ್ಮನಿ 1 | 59:05 |
ಜರ್ಮನಿ 2 | 01:04:18 |
ಆಸ್ಟ್ರಿಯಾ | 15:17 |
ರೋಮನ್ ಸಾಮ್ರಾಜ್ಯದ ಹೆಮ್ಮೆ ಇಟಲಿ | 01:46:10 |
ಭೂಸ್ವರ್ಗ 'ಸ್ವಿಟ್ಜರ್ಲೆಂಡ್' | 58:07 |
ವೈವಿಧ್ಯ, ಬೆಡಗು, ವೈಶಿಷ್ಟ್ಯತೆಯ ಸಂಗಮ ಫ಼್ರಾನ್ಸ್ | 34:01 |
ಎಲ್ಲ ಸಂಭ್ರಮಗಳಿಗೂ ಒಂದು ಕೊನೆಯಿದೆ | 07:41 |
ಬ್ರಿಟನ್ | 59:57 |
ಮರಳಿ ಗೂಡಿಗೆ | 09:03 |
ಪ್ರವಾಸ ಮಾಡುವುದಕ್ಕೆ ಬೇಕಾದ ಕನಿಷ್ಠ | 09:25 |