Naveen B.S
(ನವೀನ್ ಬಿ ಎಸ್ )

Genre type
2Thriller
Book type
2Novel

About the Author

ನವೀನ್ ಶಾಂಡಿಲ್ಯ, ಮೂಲತಃ ಬೆಂಗಳೂರಿನವರು. ಮಲ್ಲೇಶ್ವರದ ಪ್ರಖ್ಯಾತ ಎಂ ಇ ಎಸ್ ಕಾಲೇಜಿನಲ್ಲಿ ಬಿ ಕಾಮ್ ಪದವಿ ಪಡೆದು, ಪುಣೆಯ ಸಿಂಬಯಾಸಿಸ್ ನಿಂದ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಶಾಲಾ ಕಾಲೇಜು ದಿನಗಳಿಂದಲೇ ಕಥೆ ಕವನ ಬರೆಯುವ ಹವ್ಯಾಸ. ಶಾಲೆಯಲ್ಲಿ ಇವರೇ ಬರೆದು ನಿರ್ದೇಶಿಸಿದ ನಾಟಕವೊಂದು ಆಕಾಶವಾಣಿಯಲ್ಲೂ ಬಿತ್ತರಗೊಂಡಿದೆ.ಕೆಎಸ್ ನರಸಿಂಹಸ್ವಾಮಿ ಹಾಗೂ ಹೆಚ್ ಎಸ್ ವೆಂಕಟೇಶಮೂರ್ತಿ ಗಳು ಇವರ ಮಾನಸ ಗುರುಗಳು. ಪ್ರೇಮಗೀತೆಗಳ ರಚನೆ ಇವರ ಅಚ್ಚುಮೆಚ್ಚಿನ ಶೈಲಿ. ಪೆನ್ಸಿಲ್ ಸ್ಕೆಚ್ ಮಾಡುವುದು ಹಾಗು ನಾಟಕ ನಿರ್ದೇಶನ ಇವರ ಇತರೆ ಹವ್ಯಾಸಗಳು. ಅವರು ಈ ವರ್ಷವಷ್ಟೇ ಬರೆದ ಹಿರಣ್ಯಗರ್ಭ ಎಂಬ ರೋಚಕ ಕಾದಂಬರಿಗೆ ಪ್ರತಿಲಿಪಿ ಎಂಬ ಆನ್ಲೈನ್ ವೇದಿಕೆಯಲ್ಲಿ ಪ್ರಥಮ ಬಹುಮಾನ ಬಂದಿದೆ. ಅದೇ ಕಥೆಯನ್ನು ಧ್ವನಿಧಾರೆ ತಂಡದವರು ಆಡಿಯೋ ಬುಕ್ ಆಗಿ ಪ್ರಕಟಿಸಿದೆ ಕೂಡ. ಪುಸ್ತಕವಾಗಿಯೂ ಕೂಡ ಆಗಸ್ಟ್ ತಿಂಗಳಿನಲ್ಲಿ ಇದು ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿದೆ.

Audio Books by Naveen B.S

Hiranya Garbha - Audio Book
Naveen B.S

eBooks by Naveen B.S

Hiranya Garbha
Naveen B.S