Vinay Bhat
ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಒಂದಿಷ್ಟು ಆತ್ಮೀಯ ಮಾತುಕತೆ. ಆಪ್ತ ಮಾತುಕತೆಯ ಪುಟ್ಟ ಲೇಖನಗಳ ಸಂಗ್ರಹ. ಪ್ರೀತಿ ಪ್ರೇಮದ ವಿಷಯವನ್ನು ಮನೋವೈಜ್ಞಾನಿಕವಾಗಿ ಹಾಗೂ ಸಾಮಾಜಿಕವಾಗಿ ಚರ್ಚೆ ಮಾಡುವ ಲೇಖನಗಳು ಇವು. ಖಡ್ಡಾಯವಾಗಿ ಯುವಕ ಯುವತಿಯರಿಗೆ ಹಾಗೂ ಯುವ ಮನಸ್ಸಿನವರಿಗೆ ಮಾತ್ರ.
ವಿನಯ್ ಭಟ್,
ಮೂಲ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗಾರು ಎನ್ನುವ ಪುಟ್ಟ ಹಳ್ಳಿ. ಈಗ ವಾಸವಾಗಿರುವುದು ಬೆಂಗಳೂರಿನಲ್ಲಿ.
ಸಾಕ್ಷ್ಯಚಿತ್ರ, ಕಿರುಚಿತ್ರ, ಜಾಹೀರಾತುಗಳನ್ನು ತಯಾರಿಸುವುದು ಕೈ ಹಿಡಿದು ನಡೆಸುತ್ತಿರುವ ವೃತ್ತಿ. ಸುಮಾರು 200ಕ್ಕೂ ಹೆಚ್ಚು ವಿಡಿಯೋ ಫಿಲ್ಮ್‍ಗಳ ತಯಾರಿಕೆ.
ಮನದ ಸಂತೋಷಕ್ಕಾಗಿ ಬರವಣಿಗೆ. ಕನ್ನಡದ ಅನೇಕ ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮದ ಕಾರ್ಯಕ್ರಮಗಳಿಗೆ, ಜಾಹೀರಾತು ಮತ್ತು ಸಂವಹನ ಸಾಮಗ್ರಿಗಳಿಗೆ ಮತ್ತು ವೆಬ್‌ಸೈಟ್‌ಗಳಿಗೆ ಹಲವಾರು ವರ್ಷಗಳಿಂದ ನಿರಂತರ ಬರವಣಿಗೆ. ಜೊತೆಗೆ ಭಾಷಾನುವಾದ, ಸಂಘ ಸಂಸ್ಥೆಗಳಿಗೆ ಕಿರುಪುಸ್ತಕಗಳನ್ನು ತಯಾರಿಸಿಕೊಡುವುದು, ಜಾಹಿರಾತು ಮತ್ತು ಸಂವಹನ ಸಾಮಗ್ರಿಗಳನ್ನು ತಯಾರಿಸುವುದು ಹೀಗೆ ಅಕ್ಷರಕ್ಕೆ ಸಂಬಂಧಿಸಿದ ಏನೇನೋ ಕೆಲಸಗಳು.
ಇದುವರೆಗೆ 6 ಪ್ರಿಂಟ್ ಪುಸ್ತಕಗಳು ಮತ್ತು 7 ಇ-ಪುಸ್ತಕಗಳು ಪ್ರಕಟವಾಗಿವೆ.