Home / eBooks / Bottom Item
Bottom Item eBook Online

Bottom Item (ಬಾಟಮ್ ಐಟಮ್)

About Bottom Item :

ನಾವು ಚಿಕ್ಕವರಿರುತ್ತೇವೆ. ಕ್ಷುದ್ರತನವಿರುತ್ತದೆ. ನಮಗೇ ಗೊತ್ತಾಗುವಂಥ ಸಣ್ಣತನಗಳಿರುತ್ತವೆ. ನಮ್ಮ ಬಲಹೀನತೆಗಳು ಭಯ ಹುಟ್ಟಿಸುವಂಥವಾಗಿರುತ್ತವೆ. ನಮ್ಮ ಸಮಸ್ಯೆಗಳು ದುರ್ಭರವೆನಿಸುತ್ತಿರುತ್ತವೆ. ಅವುಗಳನ್ನು ಹೇಗೆ handle ಮಾಡಬೇಕೋ ಅರ್ಥವಾಗದೆ ಕಂಗಾಲಾಗುತ್ತಿರುತ್ತೇವೆ. ಎಲ್ಲೋ ಒಂದು ಪ್ರಜ್ಞಾವಂತ ಸಲಹೆ ಸಿಕ್ಕೀತಾ ಅಂತ ತಡಕಾಡುತ್ತಿರುತ್ತೇವೆ.ಹಾಗೆ ತಡಕಾಡುತ್ತಿದ್ದಾಗ ನನಗೆ ಸಿಕ್ಕಿದ್ದೇ ಈ -ಬಾಟಮ್ ಐಟಮ್.

About Ravi Belagere :

ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.

Rent Now
Write A Review