Home / eBooks / Chaaturmaasya Vratha Aacharane, Chaaturmaasya Vrathada Aduge
Chaaturmaasya Vratha Aacharane, Chaaturmaasya Vrathada Aduge eBook Online

Chaaturmaasya Vratha Aacharane, Chaaturmaasya Vrathada Aduge (ಚಾತುರ್ಮಾಸ್ಯ ವ್ರತ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆ)

About Chaaturmaasya Vratha Aacharane, Chaaturmaasya Vrathada Aduge :

ಪ್ರಪ್ರಥಮವಾಗಿ ಮಧ್ವಾಂತರ್ಗತ ಉಡುಪಿ ಶ್ರೀ ಕೃಷ್ಣನನ್ನು ಸ್ಮರಿಸುತ್ತ ಉಡುಪಿಯ ಅಷ್ಟ ಮಠದ ಶ್ರೀಪಾದರಿಗೆ ಭಕ್ತಿಪೂರ್ವಕ ನಮನಗಳು. ವಿದ್ವಾನ್ ನಿಪ್ಪಾಣಿ ಡಾ. ಗುರುರಾಜ ಆಚಾರ್ಯ, ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಹಾಗೂ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರಿಗೆ ಗೌರವ ಪೂರ್ವಕವಾದ ಕೃತಜ್ಞತೆಗಳು.ಮಾಹಿತಿಯನ್ನು ಸಂಗ್ರಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಈ ಪುಸ್ತಕದಲ್ಲಿ ಉಡುಪಿ ಮಾಧ್ವ ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತದ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನ ಮಾಡಲಾಗಿದೆ.

ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ್ಯ ವ್ರತದ ಬಗ್ಗೆ ರಚಿಸಿದ ಪದ್ಯವನ್ನು ಸಮಗ್ರ ದಾಸ ಸಾಹಿತ್ಯ ಸಂಪುಟದಿಂದ ಸಂಗ್ರಹಿಸಲಾಗಿದೆ. ಈ ಪದ್ಯವನ್ನು ಶ್ರೀ ವಿನೀತ್ ಉಡುಪಿ ಸಂಗ್ರಹಿಸಿ ಕೊಟ್ಟಿದ್ದಾರೆ.

ಈ ಪುಸ್ತಕದಲ್ಲಿರುವ ಮಾಹಿತಿಯನ್ನು ವಿದ್ವಾನ್ ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಅವರು ಬರೆದ ವಾರ್ಷಿಕ ವಿಶೇಷ ದಿನಗಳು ಪುಸ್ತಕ, ಉಡುಪಿ ಶ್ರೀ ಕೃಷ್ಣಾಪುರ ಮಠದಿಂದ ಪ್ರಕಟಣೆಯಾಗುತ್ತಿದ್ದ ಶ್ರೀಕೃಷ್ಣ ಪ್ರಕಾಶಿನಿ ಹಳೆಯ ಮಾಸ ಪತ್ರಿಕೆಗಳಿಂದ ಸಂಗ್ರಹಿಸಿದ ಲೇಖನಗಳು ಹಾಗೂ ಉಡುಪಿ ಶ್ರೀ ಪಲಿಮಾರು ಮಠದಿಂದ ಪ್ರಕಟಣೆಯಾಗುವ ಸರ್ವಮೂಲ ಮಾಸ ಪತ್ರಿಕೆಯಲ್ಲಿ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರು ಚಾತುರ್ಮ್ಯಾಸ ವ್ರತದ ಬಗ್ಗೆ ಬರೆದ ಲೇಖನಗಳಿಂದ ಸಂಗ್ರಹಿಸಲಾಗಿದೆ.

ಶ್ರೀಮತಿ ರಮಾದೇವಿ, ಶ್ರೀಮತಿ ಸುಧಾ ಭಟ್ಟ್, ಶ್ರೀಮತಿ ಭಾರ್ಗವಿ ರಾಜಮೂರ್ತಿ, ಚಾತುರ್ಮ್ಯಾಸ ವ್ರತದಲ್ಲಿ ತಯಾರಿಸಬಹುದಾದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.

ಓದುಗರು ಈ ಪುಸ್ತಕದಲ್ಲಿ ಕಂಡು ಬರುವ ಯಾವುದೇ ತರದ ದೋಷಗಳನ್ನು ನಮಗೆ ತಿಳಿಸಿದಲ್ಲಿ ದೋಷಗಳನ್ನು ಸರಿಪಡಿಸಲು ಸಹಾಯವಾಗುತ್ತದೆ. ಈ ಪುಸ್ತಕದಲ್ಲಿರುವ ಮಾಹಿತಿ ಓದುಗರಿಗೆ ಉಪಯೋಗವಾದಲ್ಲಿ ಅದು ಸಾಧ್ಯವಾಗಿದ್ದು ಉಡುಪಿ ಶ್ರೀ ಕೃಷ್ಣ ಹಾಗೂ ಶ್ರೀ ಮುಖ್ಯಪ್ರಾಣ ದೇವರಿಂದ.

- ವಾದಿರಾಜ ಮತ್ತು ರಾಜಮೂರ್ತಿ

About Vadiraja :

ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪದವೀಧರ

ಸಾಫ್ಟವೇರ್ ಕಂಪೆನಿಯಲ್ಲಿ ಸಾಫ್ಟವೇರ್ ಇಂಜನಿಯರ್, ಪ್ರೊಜೆಕ್ಟ್ ಮೇನೇಜರ್ ಉದ್ಯೋಗ ದಿಂದ ಸ್ವಯಂ ನಿವೃತ್ತಿ. ಸ್ಪೀಡ್ ಮ್ಯಾಥಮೆಟಿಕ್ಸ್ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ತರಬೇತಿ.

Rent Now
Write A Review

Same Author Books