Hulivesha - Kategalu

Hulivesha - Kategalu

Vittal Shenoy

0

0
eBook
Downloads3 Downloads
KannadaKannada
Short StoriesShort Stories
SocialSocial
PageeBook: 275 pages

About Hulivesha - Kategalu

ಮಂಗಳೂರಿನಲ್ಲಿ 70 ಮತ್ತು 80 ರ ದಶಕದಲ್ಲಿ ಹುಟ್ಟಿ ಬೆಳೆದ ಹುಡುಗರಿಗೆ ಹುಲಿವೇಷ ಎಂದರೆ ಮೈ ಮೇಲೆ ಆವೇಶ ಬಂದಂತೆ. ನವರಾತ್ರಿಯ ಕೊನೆಯ ಆ ನಾಲ್ಕು-ಐದು ದಿನಗಳಲ್ಲಿ ಅಲ್ಲಲ್ಲಿ ಹುಲಿವೇಷದ ನೃತ್ಯ ನೋಡಿ, ಅದರ ಜೊತೆ ರಸ್ತೆಗಳಲ್ಲಿ ಒಂದಿಷ್ಟು ಅಡ್ಡಾಡಿ, ನಂತರ ಕೊನೆಯ ದಿನ ಶಾರದಾ ಮಾತೆಯ ಶೋಭಾಯಾತ್ರೆಯ ಜೊತೆ ಕೊನೆಗೊಳ್ಳುವ ಆ ದಿನಗಳು, ಮುಂದಿನ ವರ್ಷ ಮತ್ತೆ ಎದುರು ನೋಡುವಂತವು. ಇಂತಹ ಅನುಭವಗಳನ್ನು ಕೊಟ್ಟ ಹುಲಿವೇಷದ ದಂಡನ್ನು ಆಧಾರವಾಗಿಟ್ಟು ಕತೆ ಬರೆಯುವ ಹುಮ್ಮಸ್ಸಾಯಿತು. ಬರೆದು ಮುಗಿಸಿದಾಗ ಅದು ಕಾದಂಬರಿಯಷ್ಟು ದೊಡ್ದದಾಗಲಿಲ್ಲ, ಸಣ್ಣ ಕತೆಯಷ್ಟು ಸಣ್ಣದಾಗಲಿಲ್ಲ. ವಿನಾಃ ಕಾರಣ ಅದನ್ನು ಎಳೆದು ಕಾದಂಬರಿ ಮಾಡುವುದೋ ಅಥವಾ ಮೊಟಕುಗೊಳಿಸಿ ಸಣ್ಣ ಕತೆ ಮಾಡುವುದಕ್ಕೆ ಮನಸ್ಸು ಬರಲಿಲ್ಲ. ಆ ಕತೆಯನ್ನು ಇದ್ದ ಹಾಗೆ ಬಿಟ್ಟು ಅದರ ಜೊತೆಗೆ ಆರು ಇತರ ಕತೆಗಳನ್ನು ಜೊತೆಗೂಡಿಸಿ ಈ ಕಥಾ ಸಂಕಲನ ಹೊರ ತಂದಿದ್ದೇನೆ. ಎಲ್ಲಾ ಕತೆಗಳು ಮತ್ತು ಪಾತ್ರಗಳು ಕಾಲ್ಪನಿಕ. ಕೆಲವು ಕತೆಗಳು ಪ್ರತಿಲಿಪಿ ಆನ್ಲೈನ್ ದಲ್ಲಿ ಪ್ರಕಟವಾಗಿ ಮನ್ನಣೆಗಳಿಸಿವೆ.

ಪುಸ್ತಕ ಬರೆಯಲು ಸಮಯ ಮತ್ತು ವಾತಾವರಣ ಒದಗಿಸಿ ಕೊಟ್ಟ ನನ್ನ ಪತ್ನಿ, ಮಕ್ಕಳು, ತಾಯಿ ತಂದೆಯವರಿಗೆ ನಾನು ಸದಾ ಆಭಾರಿ. ಪ್ರಕಟಿಸಲು ಒಪ್ಪಿದ ಟೋಟಲ್ ಕನ್ನಡದ ಮಾಲೀಕರು ಶ್ರೀ ಲಕ್ಷ್ಮಿಕಾಂತ್ ರವರಿಗೆ ಹಾಗೂ ಕರಡು ಪ್ರತಿಯನ್ನು ತಿದ್ದಿದ ನನ್ನ ಅಕ್ಕ ಶ್ರೀಮತಿ ಗೀತಾ ಪೈ ಯವರಿಗೆ ಧನ್ಯವಾದಗಳು. ಪುಸ್ತಕದ ಮಾರಾಟದ ಲಾಭಾಂಶವೆಲ್ಲಾ ಸದುಪಯೋಗಿ ಕೆಲಸಕ್ಕೆ ನನ್ನ ಪ್ರತಿ ಪುಸ್ತಕದಂತೆ ಮೀಸಲಾಗಿಟ್ಟಿದ್ದೇನೆ. ನಿಮ್ಮ ಅನಿಸಿಕೆಗಳನ್ನು ಕೆಳಕಂಡ ಮಿಂಚಂಚೆ / ದೂರವಾಣಿಗಳ ಮೂಲಕ ವ್ಯಕ್ತ ಪಡಿಸಲು ನನ್ನ ಕಳಕಳಿಯ ಮನವಿ.

ಇಂತಿ ನಿಮ್ಮಯ,

ವಿಠಲ್ ಶೆಣೈ

About Vittal Shenoy:

ಮಂಗಳೂರಿನಲ್ಲಿ ಹುಟ್ಟಿ, ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿದ ವಿಠಲ್ ಶೆಣೈಯವರು, ಬೆಂಗಳೂರಿನ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಬರವಣಿಗೆಯ ಹುಚ್ಚು ಕಳೆದ ಏಳು-ಎಂಟು ವರ್ಷಗಳಿಂದ ಪ್ರಾರಂಭವಾಗಿ ಈಗ ಪುಸ್ತಕ ಪ್ರಕಾಶನದತ್ತ ತಮ್ಮ ಸಾಹಿತ್ಯ ಪ್ರಯಾಣವನ್ನು ಮುಂದುವರೆಸಿದ್ದಾರೆ. ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರ್-ಗಳಂತಹ ದೇಶಗಳನ್ನು ಕೆಲಸದ ನಿಮಿತ್ತ ವಿಹರಿಸಿ, ವಿವಿಧ ಜನರೊಡನೆ ಬೆರೆತು, ಅಲ್ಲಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಅವುಗಳನ್ನು ಕಥೆ, ಪ್ರಬಂಧ ಮತ್ತು ಕಾದಂಬರಿಗಳಲ್ಲಿ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿ, ಕೆ.ಎನ್.ಗಣೇಶಯ್ಯ ನವರಂತಹ ಮಹಾನ್ ಲೇಖಕರ ಬರಹಗಳನ್ನು ಓದಿ ಪ್ರೇರೇಪಿತರಾಗಿದ್ದಾರೆ. ಸಾಫ್ಟ್ವೇರ್ ಕೋಡ್ ಮತ್ತು ಕಥೆಗಳನ್ನು ನಿಯತವಾಗಿ ಬರೆಯುತ್ತಾರೆ.

More books by Vittal Shenoy

Taalikoteya Kadanadalli
Taalikoteya Kadanadalli
Vittal Shenoy
Hulivesha - Kategalu
Hulivesha - Kategalu
Vittal Shenoy

Books Similar to Hulivesha - Kategalu

View All
Deivam Nindru Kollum
Deivam Nindru Kollum
Sivasankari
Aimbathu Latcham Dosai!
Aimbathu Latcham Dosai!
Pattukottai Prabakar
Dinasari Ennai Anusari
Dinasari Ennai Anusari
Devibala
Kurinji Malar
Kurinji Malar
Na. Parthasarathy
Aairam Kaalathu Payir
Aairam Kaalathu Payir
Sivasankari