Nagesh Kumar CS
ಕಿರುತೆರೆ ಧಾರಾವಾಹಿಯ ಮೂಲಕ ಮನೆಮಾತಾದ ನಟಿಯೊಬ್ಬಳು ತನ್ನಗ್ಯಾರೋ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆಂದೂ, ತನ್ನ ಜನ್ಮರಹಸ್ಯವೇನೋ ಕ್ರೂರವಾಗಿದೆಯೆಂದೂ ಸಹಾಯ ಯಾಚಿಸಿ ವಿಜಯ್ ನನ್ನು ಸಂಪರ್ಕಿಸುತ್ತಾಳೆ.ಪತ್ರಗಳ ಜಾಡು ಹಿಡಿದು ಹೊರಟ ವಿಜಯ್ ಗೆ ಲೂಸಿಯ ಪರಿಚಯವಾಗುತ್ತದೆ. ಒಂದರ ಹಿಂದೊಂದು ವಿಚಿತ್ರ ಘಟನೆ ಸಂಭವಿಸುತ್ತದೆ. ನಟಿಯ ಆ ಕಾರಾಳ ಜನ್ಮ ರಹಸ್ಯ ತಿಳಿಯುವುದೇ ಎಂಬ ಕುತೂಹಲಕಾರಿ ಕಥಾನಕವೇ ಕರಾಳಗರ್ಭ.
ಲೇಖಕನ ಕಿರು ಪರಿಚಯ:
ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್. ಹುಟ್ಟಾ ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.
ನಾನು ಹವ್ಯಾಸಿ ಕನ್ನಡ ಮತ್ತು ಇಂಗ್ಲೀಷ್ ಬರಹಗಾರ.
ಇದುವರೆಗೂ 12 ಸಣ್ಣ ಕತೆಗಳನ್ನೂ, 4 ಕಿರು ಕಾದಂಬರಿಗಳನ್ನೂ ರಚಿಸಿ ತರಂಗ, ತುಷಾರ, ಉತ್ಥಾನ, ಸುಧಾ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ.
ಅಲ್ಲದೇ ಸಖಿ ಯ ಮೇ ೧ ಸಂಚಿಕೆಯಲ್ಲಿ ದೋಹಾ ನಗರದ ಬಗ್ಗೆ ಪ್ರವಾಸಕಥನ ಬರೆದಿದ್ದೇನೆ.
ಕನ್ನಡಪ್ರಭ ಆನ್ ಲೈನ್ ಆವೃತ್ತಿಯಲ್ಲಿ ಮೂರು ಲೇಖನಗಳೂ ಪ್ರಕಟವಾಗಿವೆ