Home / eBooks / Nakshatra Jaaridaaga
Nakshatra Jaaridaaga eBook Online

Nakshatra Jaaridaaga (ನಕ್ಷತ್ರ ಜಾರಿದಾಗ)

About Nakshatra Jaaridaaga :

ನಕ್ಷತ್ರ ಜಾರಿದಾಗ: ಪ್ರಾಕ್ಸಿಮಾ ಸೆಂಕ್ಚುವರಿ ನಕ್ಷತ್ರ, ಆಗಸದ ತೆಕ್ಕೆಯಿಂದ ಜಾರಿ, ಭೂಮಿಯ ಸನಿಹದಲ್ಲಿ ಹಾಯುವಾಗಿನ ಕ್ಷಣದಲ್ಲಿ, ಭೂಮಿಯ ಮೇಲೆ ಉದ್ಭವವಾಗುವ ಸಾಮಾಜಿಕ, ರಾಜಕೀಯ, ಧಾರ್ಮಿಕ, ಪ್ರಾಕೃತಿಕ ಕೋಲಾಹಗಳ ಒಳನೋಟ. ಈ ಯುಗಾಂತ ತಪ್ಪಿಸಲು ವಿಜ್ಞಾನಿಗಳು ತೊಡುವ ಪಣ, ಭೂಮಿಯ ಅಂತ್ಯವೆಂಬ ಗೌಪ್ಯಮಾಹಿತಿ ಸೋರಿಕೆಯಾದಾಗ ಪದರಪದರವಾಗಿ ಅನಾವರಣಗೊಳ್ಳುವ ಮನುಷ್ಯನ ನಿಜರೂಪವೇ ನಕ್ಷತ್ರ ಜಾರಿದ ಆ ಕ್ಷಣ.

About Ravi Belagere :

ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.

Rent Now
Write A Review

Same Author Books