Vijayalakshmi S.P.
ಮಕ್ಕಳಿಗಾಗಿ ಕಾದಂಬರಿಗಳಿರುವುದೇ ಕಡಿಮೆ. ಕತೆಗಳಿವೆಯಾದರೂ ಸಣ್ಣ ಕತೆಗಳು, ನೀತಿ ಕತೆಗಳೇ ಹೆಚ್ಚು. ಕಾದಂಬರಿ ಎಂದೊಡನೆ ಅದು ದೊಡ್ಡವರಿಗಷ್ಟೆ ಎಂಬ ಅಭಿಪ್ರಾಯವಿದೆ. ಇಲವೇ ತೀರಾ ಕಾಲ್ಪನಿಕವಾದ ಒಂದಂಶವೂ ಸತ್ಯವಲ್ಲದ ನೀಳ್ಗತೆಗಳು ಸಿಗುತ್ತವೆ. ಆದರೆ ಬದುಕಿನ ವಿವಿಧ ಆಯಾಮಗಳ, ಕಾಲ ದೇಶದ ವಾಸ್ತವ ಪ್ರಪಂಚದ ವಿಚಾರವನ್ನು ಮಗುವಿನ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ಕುತೂಹಲಕಾರಿಯಾಗಿ ವಿವರಿಸುವ ಅಜ್ಜಿ-ಮೊಮ್ಮಗಳ ಈ ಕಥಾಲೋಕ ಎಲ್ಲಾ ಮಕ್ಕಳ ಮೆಚ್ಚಿನ ಪುಟ್ಟ ಕಾದಂಬರಿಯಾಗುವುದು ಎನ್ನುವುದಂತೂ ಸುಳ್ಳಲ್ಲ. ಮಕ್ಕಳಿಗೆ ಮನಸ್ಸು ಮಾಗುವ ಸಮಯದಲ್ಲಿ ಇಂತಹ ಕಥೆಗಳ ಮೂಲಕ ಕನ್ನಡ ಭಾಷೆಯ ಬಗ್ಗೆ ಪ್ರೀತಿಯನ್ನೂ, ನಮ್ಮ ನಾಡಿನ ಸಂಸ್ಕೃತಿ ಹಬ್ಬ ಆಚರಣೆಗಳನ್ನೂ ಅವುಗಳಲ್ಲಿ ಸೇರಿಹೋದ ಮೌಲ್ಯಗಳನ್ನೂ ತಿಳಿಸುವುದು ಮುಖ್ಯವಾಗುತ್ತದೆ.
ಹೆಸರು ಎಸ್.ಪಿ. ವಿಜಯಲಕ್ಷ್ಮಿ. ಬಿ.ಎ. ಪದವೀಧರೆ. ಹುಟ್ಟಿದ್ದು ನರಸಿಂಹರಾಜಪುರ. ಶಾಲಾ ದಿನಗಳಲ್ಲಿ ಉತ್ತಮ ಡಿಬೇಟರ್. ವಿವಾಹಾನಂತರ ಬೆಂಗಳೂರಲ್ಲಿ ನೆಲೆಸಿದ್ದಾರೆ. ಕಸೂತಿ, ಟೈಲರಿಂಗ್ ಹವ್ಯಾಸ. ನಂತರದಲ್ಲಿ ಬರವಣಿಗೆ ಹವ್ಯಾಸವಾಯಿತು. ವಿಶ್ವದ ಹಲವಾರು ದೇಶಗಳ ಪ್ರವಾಸ ಮಾಡಿರುವ ನನ್ನ ಬಹಳಷ್ಟು ಕಥೆಗಳು, ಲೇಖನಗಳು, ಪ್ರವಾಸ ಕಥನಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ...ಇದುವರೆಗೂ 3 ಕಾದಂಬರಿ , 4 ಕಥಾಸಂಕಲನ, 4 ಕವನ ಸಂಕಲನ ಪ್ರಕಟವಾಗಿದೆ... ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಬಹುಮಾನದ ಜೊತೆ , ಇನ್ನೂ ಅನೇಕ ಬಹುಮಾನಗಳು ಸಂದಿವೆ.