ಜೀವನದಲ್ಲಿ ಅತೀ ಕೌತುಕವೆನ್ನಿಸುವ ವಿಷಯ ಅಂದರೆ ಮನುಷ್ಯನ ‘ಮನಸ್ಸು’. ಬಾಹ್ಯವಾಗಿ ಹೇಗೆ ಕಂಡರೂ ನಿಜವಾದ ‘ನಾವು’ ಏನೆಂಬುದು ನಮ್ಮ ಮನಸ್ಸಿಗೆ ಮಾತ್ರ ಗೊತ್ತಿರುವ ಸತ್ಯ. ನಮ್ಮ ನಿರ್ಧಾರಗಳು, ಕಾರ್ಯಗಳು ಎಲ್ಲವೂ ನಿಂತಿರುವುದು ಮನಸ್ಸಿನ ಮೇಲೆಯೇ.
ಯಾರಿಗೂ ಹೇಳದ ಮನಸ್ಸಿನ ತೊಳಲಾಟ ಮತ್ತದರಿಂದ ‘ಮುಕ್ತಿ’ ಪಡೆಯುವ ಹೆಣಗಾಟ, ಎಲ್ಲರಲ್ಲೂ ಪ್ರಶ್ನೆಯನ್ನೇ ಉಳಿಸಿಹೋಗುವ ನಾವು ಮಾತ್ರ ಬಲ್ಲ ಉತ್ತರ ಮತ್ತು ಎಲ್ಲರ ಉತ್ತರದಿಂದ ನಮ್ಮಲ್ಲೇ ಉಳಿಯುವ ‘ಪ್ರಶ್ನೆ’, ಮನಸ್ಸಾಕ್ಷಿಯ ಜೊತೆ ನಾವೇ ನಡೆಸುವ ‘ಸಂಧಿಗ್ಧತೆ’ಯ ಚರ್ಚೆ, ಮತ್ತು ‘ಅನಿರೀಕ್ಷಿತ’ವಾಗಿ ನಡೆಯುವ ಭೇಟಿಯಿಂದ ಮನದಲ್ಲಾಗುವ ತಲ್ಲಣ ಮತ್ತು ಮೌನವೇ ಬಿಟ್ಟ ನಿಟ್ಟುಸಿರು. ಇವೇ ಇಲ್ಲಿರುವ ನಾಲ್ಕು ಕಥೆಗಳ ಪುಸ್ತಕ “ಸುರುಳಿ…. ಮನಕೆ ಸುತ್ತಿದ ಕಥೆಗಳು”.
ವೈದ್ಯಕೀಯ ವೃತ್ತಿ, ಹವ್ಯಾಸಿ ಬರಹಗಾರ. ಮನದ ಭಾವನೆಗಳನ್ನು, ಕಲ್ಪನೆಗಳನ್ನು ಪದಗಳಲ್ಲಿ ಮೂಡಿಸುವ ಪ್ರಯತ್ನ. ಕನ್ನಡ ಸಾಹಿತ್ಯದ ಖಾಸಾ ಅಭಿಮಾನಿ…
Rent Now Swarna
Yaa these stories relate to our lives