Home / eBooks / The Gift
The Gift eBook Online

The Gift (ದಿ ಗಿಫ್ಟ್)

About The Gift :

ಈ ಪುಸ್ತಕವನ್ನು ನೀವು ಎಲ್ಲಿಂದ ಬೇಕಾದರೂ ಓದಬಹುದು, ಬೇಜಾರಾದರೆ ಮುಚ್ಚಿಡಬಹುದು. ಇದನ್ನು ಓದುವ ಚಟ ಮತ್ತೆ ತಲೆಯೆತ್ತಿದರೆ ಈ ಪುಸ್ತಕವನ್ನು ನೀವು ಮತ್ತೆಲ್ಲಿಂದಲಾದರೂ ಓದಲು ಪ್ರಾರಂಭಿಸಬಹುದು. ಇದು ಕತೆಯಲ್ಲ, ಕಾದಂಬರಿಯಲ್ಲ. Thank god, ಕವನ ಸಂಕಲನವಂತೂ ಅಲ್ಲವೇ ಅಲ್ಲ. ನನಗೆ ಯಾರಾದರೂ ಕವನ ಕಳಿಸಿದರೆ ಮೊದಲ ಎರಡು ಸಾಲುಗಳನ್ನು ಓದಿ ಪಕ್ಕಕ್ಕಿಟ್ಟು ಭಕ್ತಿಯಿಂದ ನಮಸ್ಕರಿಸುತ್ತೇನೆ. ಅದನ್ನು ಮತ್ತೆ ಮುಟ್ಟುವ ತಂಟೆಗೆ ಹೋಗುವುದಿಲ್ಲ. ಇಂಥ ಯಾವುದೇ ಕೆಟಗರಿಗೂ ಸೇರದ `ದಿ ಗಿಫ್ಟ್' ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. - ರವಿ ಬೆಳೆಗೆರೆ

About Ravi Belagere :

ರವಿ ಬೆಳಗೆರೆ. ಕನ್ನಡ ಅಕ್ಷರಲೋಕದ ಮಾಂತ್ರಿಕ ಎಂದೇ ಖ್ಯಾತರಾದ ಹಿರಿಯ ಪತ್ರಕರ್ತ, ಬರಹಗಾರ.

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ.

Rent Now
Write A Review