Home / eBooks / Vyuha
Vyuha eBook Online

Vyuha (ವ್ಯೂಹ)

About Vyuha :

ಇದೊಂದು ತಿರುವುಗಳಿಂದ ಕೂಡಿರುವ ಕತೆ. ನಾ ಬರೆದ ಮೊದಲ ಕತೆಯಿದಾಗಿದ್ದು, ಕನಸಿನ ಕೂಸು ಹೌದು. ಬರಿ ಕವಿತೆಗಳು ಬರೆಯುತ್ತಿದ್ದ ನನ್ನ ಮನದಲ್ಲಿ ಈ ಕತೆ ಜನ್ಮ ತಳೆದಿದ್ದೇ ಒಂದು ಸೋಜಿಗ. ಈ ಕತೆಗೆ ಮುನ್ನುಡಿ ಬರೆದ ಸನ್ನಿವೇಶ ಇಂತಿದೆ "ನನ್ನ ಗೆಳೆಯನ ಪರಿಚಯಸ್ಥರೊಬ್ಬರು ಕಾಣೆಯಾಗುತ್ತಾರೆ. ಅವರು ಪ್ರೀತಿಸಿ ಮದುವೆಯಾಗಿ ಹಿಂದಿರುಗುತ್ತಾರೆ. ಆದರೆ ಆ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ನಾನು ಕೇಳ್ಪಟ್ಟ ಸಮಯದಲ್ಲೇ ವೇಶ್ಯಾವಾಟಿಕೆ ಅಡ್ಡದ ಮೇಲೆ ದಾಳಿ ನಡೆದ ಸುದ್ದಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಯಿತು." ಈ ಎರಡೂ ವಿಷಯಗಳು ನನ್ನ ಮನದಲ್ಲಿ ಅಚ್ಚಾಗಿ ಉಳಿಯಿತು...ಇದು ಒಂದೆರಡು ದಿನ ನಿದ್ದೆಗೆಡಿಸಿತ್ತು. ಇದನ್ನ ನನ್ನ ಬರವಣಿಗೆಗೆ ಹೇಗೆ ಉಪಯೋಗಿಸಬಹುದು ಎಂಬ ಸಣ್ಣ ಮಿಂಚಂತೆ ಹೊಳೆಯಿತು. ಅಲ್ಲಿಂದ ಕತೆ ಬರೆಯಲು ಆರಂಭಿಸಿದ್ದು. "ಒಂದು ಮನೆಯ ಹೆಣ್ಣು ಮಗಳು ಕಾಣೆಯಾದಾಗ, ಆ ಮನೆಯ ತಳಮಳ, ಅವಳ ಸುತ್ತಮುತ್ತಲಿನವರ ಕಳವಳ ವ್ಯಕ್ತ ಪಡಿಸುವ ಒಂದು ಸಣ್ಣ ಪ್ರಯತ್ನ ಇದು. ಕಾಣೆಯಾದವು ಹೆಣ್ಣು ವ್ಯಭಿಚಾರದ ವ್ಯೂಹದಲ್ಲಿ ಸಿಕ್ಕಿದ್ದಾಳೆ ಎಂಬ ಅನುಮಾನ ಬಂದ ಕೂಡಲೇ, ಪೊಲೀಸ್, ಕೋರ್ಟ್ ಎಂಬ ತಾಪತ್ರಯದ ಬಗ್ಗೆ, ಹೆಣ್ಣಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ತನ್ನ ಬುದ್ಧಿಶಕ್ತಿಯಿಂದ ಹೇಗೆ ಪಾರು ಮಾಡಲು ಯೋಜನೆ ಹೂಡಬಹುದೆಂಬ ಕಲ್ಪನೆ ಇದು. ಈ ಬುದ್ಧಿವಂತಿಕೆಯೊಂದಿಗೆ, ಲಾ & ಆರ್ಡರ್, ರಾಜಕೀಯ ಬಲವಿದ್ದರೆ ಹೇಗೆ? ಎಂದು ಯೋಚಿಸಿದೆ. ಕಾರಣ ಇಷ್ಟೇ ... ನಾವು ಅದೆಷ್ಟೋ ಕತೆಗಳಲ್ಲಿ, ನಾಟಕದಲ್ಲಿ, ಸಿನಿಮಾದಲ್ಲಿ ಈ ಲಾ & ಆರ್ಡರ್, ಹಾಗೂ ರಾಜಕೀಯ ಶಕ್ತಿ ಹೇಗೆ ದುರುಪಯೋಗ ಮಾಡಿಕೊಳ್ಳಬಹುದು, ಮಾಡಿಕೊಳ್ಳುತ್ತಿದ್ದಾರೆ ಎಂದು ನೋಡಿದೆವು, ಓದಿದೆವು. ಇದನ್ನು ವೈರುಧ್ಯವಾಗಿ ಅಂದರೆ ಒಂದು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಹೇಗೆ? ಎಂಬ ಚಿಂತನೆ ಮೂಡಿತು. ಅದಕ್ಕೆ ಈ ಎರಡೂ ಅಸ್ತ್ರಗಳನ್ನು ನಾನು ನಾಯಕ, ನಾಯಕಿಯ ಪರವಾಗಿ ಬಳಸಿಕೊಂಡೆ. ಕತೆ ಓದುತ್ತಿರುವವರಿಗೆ ಒಂದು ಪ್ರಶ್ನೆ ಮೂಡುವುದು ಸಹಜ "ಅಯ್ಯೋ ...ಇದೇನಿದು ಎಲ್ಲ.ಇವರ ಪರವಾಗೇ ನಡೆಯುತ್ತಿದೆ? ಏನೂ ಇಲ್ಲಿರೋ ಎಲ್ಲರನ್ನೂ ದೇವರಾಗಿಸಿದ್ದಾರೆ ಲೇಖರು ಎಂದು" ಆದರೆ ನಾನು ಸ್ವಲ್ಪ ಹೊಸತಾಗಿ ಯೋಚನೆ ಮಾಡ ಬಯಸಿದೆ. ಅದು ನಿಮ್ಮ ಮುಂದಿಟ್ಟಿದ್ದೇನೆ. ಓದುಗರ ಗಮನಕ್ಕೆ - ನಾನು ವ್ಯಭಿಚಾರದ ಆಳಕ್ಕೆ, ಅದರ ಆಗಲ ಬಣ್ಣಿಸಲು ನನ್ನ ಮನಸ್ಸು ಇಳಿಯಲಿಲ್ಲ. ಜಾಲತಾಣದಲ್ಲಿ ನಡೆಸಿದ ಸಂಶೋಧನೆಯಿಂದ ತಳಿದಿದು ಅವರುಗಳ ನಿರ್ಲಿಪ್ತತೆ ಮಾತ್ರ. ಆದ್ದರಿಂದ ಯಾಕೋ ಅವರುಗಳು ಪಡುವ ಮಾನಸಿಕ ಯಾತನೆಯನ್ನು ಬರೆಯಲು ಹೊರಟಾಗ ಮನಸಿಗೆ ತುಂಬಾನೆ ಕಸಿವಿಸಿಯಾಯ್ತು. ನನ್ನ ಬರವಣಿಗೆಯನ್ನು ಒಂದುವರೆ ವರುಷ ನಿಲ್ಲಿಸಿದರೂ, ಮತ್ತೆ ಬರೆತಯುವಾಗಲೂ ಹಿಂಸೆ ತಪ್ಪಲಿಲ್ಲ. ಅದಕ್ಕಾಗಿ ಅಷ್ಟು ಆಳಕ್ಕೆ ಬರೆಯಲಿಲ್ಲ. ಬರಿ ಸಿಕ್ಕಿ ಹಾಕಿಕೊಂಡವರ ಬಿಡಿಸಿಕೊಳ್ಳಲು ಮಾಡುವ ಯೋಜನೆ, ಕಾರ್ಯರೂಪ ಮಾತ್ರ ಬರೆಯಲು ನಿರ್ಧರಿಸಿದೆ.

About Lohith :

Lohith was born and brought up in bangalore. He is a B.Com. graduate and a rank holder in Bangalore University. He started to write short poems at the age of 12-13. However a meaningful content was only framed during his 2nd PUC, at the age of 18 and he continued to write from then onwards. His lines (nanna saalugalu) is not restricted to any category of poems. It covers lots of feelings like love, sentiments etc. It consist of any subject that would inspire him. Vyuha was inspired by a news report wherein a private channel allegedly reported about raiding a prostitution centre. This story is purely a fictitious and not related to any incident or anybody in person.

Rent Now
Write A Review

Rating And Reviews

Book Review  Kiran

Good

Same Author Books