Home / Narrators / Jyothi Prashanth

Jyothi Prashanth

About the Narrator

ಜ್ಯೋತಿ ಪ್ರಶಾಂತ್ ಮೂಲತಃ ಮೈಸೂರಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸ. ಕಳೆದ ಒಂದು ದಶಕದಿಂದ ಕೆಲವಾರು NGO ಗಳಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಹಲವಾರು ಕಾರ್ಯಕ್ರಮ ನಿರೂಪಕಿಯಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ‌. ಕೆಲವು ಅಂತರ್ಜಾಲ ಪತ್ರಿಕೆಗಳಿಗೆ ನಿರಂತರವಾಗಿ ಅಂಕಣ ಬರೆದಿದ್ದಾರೆ. ಆಕಾಶವಾಣಿಯ ಕನ್ನಡ ಕಾಮನಬಿಲ್ಲಿನಲ್ಲಿ ಕಳೆದ ಏಳು ವರ್ಷಗಳಿಂದ ಅರೆಕಾಲಿಕ ಕಾರ್ಯಕ್ರಮ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಸಮಾನ ಮನಸ್ಕ ಸ್ನೇಹಿತರೊಂದಿಗೆ ಕೂಡಿ ಪ್ರತಿಬಿಂಬ ಟ್ರಸ್ಟ್ ಹಾಗು ಧ್ವನಿಧಾರೆ ಮೀಡಿಯಾ ಸ್ಥಾಪಿಸಿದ್ದಾರೆ. ಕನ್ನಡದ ಅನೇಕ ಹೆಸರಾಂತ ಬರಹಗಾರರ ಆಡಿಯೋಪುಸ್ತಕಗಳಿಗೆ ಧ್ವನಿ ನೀಡಿದ್ದಾರೆ.

Narrator's Books